ಹೊನ್ನಾವರ: ಛಾಯಾಗ್ರಹಣ ಸ್ಪರ್ಧೆ

7

ಹೊನ್ನಾವರ: ಛಾಯಾಗ್ರಹಣ ಸ್ಪರ್ಧೆ

Published:
Updated:

ಬೆಂಗಳೂರು: ಹೊನ್ನಾವರದ ಬಳಿಯ ಗುಣವಂತೆಯ ‘ಯಕ್ಷಾಂಗಣ’ ದಲ್ಲಿ ಇದೇ 27ರಿಂದ 31ರವರೆಗೆ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟಕೋತ್ಸವ–9 ನಡೆಯಲಿದ್ದು, ಇದರ ಅಂಗವಾಗಿ ಸಾಗರ ಫೋಟೋಗ್ರಾಫಿಕ್ ಸೊಸೈಟಿ ಸಹಯೋಗದಲ್ಲಿ ಛಾಯಾಗ್ರಹಣ ಸ್ಪರ್ಧೆ ಏರ್ಪಡಿಸಲಾಗಿದೆ.

ಮಾಹಿತಿಗೆ 70195–71236 ಸಂಪರ್ಕಿಸಬಹುದು. ಕಳೆದ ಸಾಲಿನ ಸ್ಪರ್ಧೆಯಲ್ಲಿ ಸಾಗರದ ಎಸ್. ಅಮರದೀಪ ಮತ್ತು ಹೊನ್ನಾವರದ ರಾಮಕೃಷ್ಣ ಹೆಗಡೆಗೆ ಕ್ರಮವಾಗಿ ಪ್ರಥಮ ದ್ವಿತೀಯ ಬಹುಮಾನ ದೊರೆತಿದೆ.

ಗೌರವ ಪುರಸ್ಕಾರಕ್ಕೆ ರಾಜಾರಾಮ್ ಹೆಗಡೆ ಶಿರ್ಸಿ, ಸುಹಾಸ್ ಮುತ್ಮುರ್ಡು, ಸಾಗರದ ಕೆ. ಚಂದ್ರಶೇಖರ ಸಾಗರ, ವಿ.ಡಿ. ಭಟ್ ಸುಗಾವಿ, ಶಶಿಧರ್ ಗುಣವಂತೆ, ಕಮಲಾಕರ ಹೆಗಡೆ ಹಾವೇರಿ, ಬೆಂಗಳೂರಿನ ಸುದರ್ಶನ ಕೆ. ಹೆಗಡೆ ಆಯ್ಕೆಯಾಗಿದ್ದಾರೆ. ತಲಾ₹12,000 ಬಹುಮಾನವನ್ನು ಈ ಪ್ರಶಸ್ತಿ ಒಳಗೊಂಡಿವೆ. ಇದೇ 31ರಂದು ಬಹುಮಾನ ವಿತರಿಸಲಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry