ಸಿದ್ಧಗಂಗಾ ಶ್ರೀಗೆ ಭಾರತ ರತ್ನ?

7

ಸಿದ್ಧಗಂಗಾ ಶ್ರೀಗೆ ಭಾರತ ರತ್ನ?

Published:
Updated:
ಸಿದ್ಧಗಂಗಾ ಶ್ರೀಗೆ ಭಾರತ ರತ್ನ?

ತುಮಕೂರು: ಭಾರತರತ್ನ ಪುರಸ್ಕಾರಕ್ಕೆ ಸಿದ್ಧಗಂಗಾ ಮಠಾಧೀಶ ಶಿವಕುಮಾರ ಸ್ವಾಮೀಜಿ ಅವರ ಹೆಸರು ಪ್ರಸ್ತಾಪವಾಗಿದೆ ಎಂದು ಉನ್ನತ  ಮೂಲಗಳು ತಿಳಿಸಿವೆ

’ನವದೆಹಲಿಯಲ್ಲಿ ಗೃಹ ಸಚಿವ ರಾಜನಾಥ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಆಯ್ಕೆ ಸಮಿತಿಯ ಗೌಪ್ಯ ಸಭೆಯಲ್ಲಿ ಸ್ವಾಮೀಜಿ ಹೆಸರು ಪ್ರಸ್ತಾಪವಾಯಿತು. ಕಳೆದ ವರ್ಷವೂ ಶ್ರೀಗಳ ಹೆಸರು ಪ್ರಸ್ತಾವವಾಗಿತ್ತು. ಆದರೆ ಈ ಸಲ ಪುರಸ್ಕಾರ ನೀಡುವುದು ಬಹುತೇಕ ಖಚಿತವಾಗಿದೆ’ ಎಂದು ಮೂಲಗಳು ಹೇಳಿವೆ.

ಸ್ವಾಮೀಜಿ ಅವರುಇದೇ ಏಪ್ರಿಲ್‌ 1ಕ್ಕೆ 111ನೇ ವರ್ಷಕ್ಕೆ ಕಾಲಿರಿಸುವರು. ಸುಮಾರು 8000 ಮಕ್ಕಳು ಮಠದಲ್ಲಿ ಕಲಿಕೆಯಲ್ಲಿ ತೊಡಗಿದ್ದಾರೆ. ಶ್ರೀಗಳಿಗೆ ’ಭಾರತ ರತ್ನ’ ಪುರಸ್ಕಾರ ನೀಡಬೇಕೆಂದು ಜಿಲ್ಲೆಯ ಜನರು, ಹಲವು ಗಣ್ಯರು ಒತ್ತಾಯಿಸುತ್ತಲೇ ಬರುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry