ಕೊಲೆ ಶಂಕೆ: ಮಹಿಳೆ ಪೊಲೀಸರ ವಶಕ್ಕೆ

7

ಕೊಲೆ ಶಂಕೆ: ಮಹಿಳೆ ಪೊಲೀಸರ ವಶಕ್ಕೆ

Published:
Updated:
ಕೊಲೆ ಶಂಕೆ: ಮಹಿಳೆ ಪೊಲೀಸರ ವಶಕ್ಕೆ

ಮೂಡಿಗೆರೆ: ತಾಲ್ಲೂಕಿನ ಕುನ್ನಳ್ಳಿಯಲ್ಲಿ ವ್ಯಕ್ತಿಯೊಬ್ಬನ ಶವವನ್ನು ಅನುಮಾನಾಸ್ಪದವಾಗಿ ಸುಟ್ಟು ಹಾಕಿದ ಘಟನೆಗೆ ಸಂಬಂಧಿಸಿದಂತೆ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕುನ್ನಳ್ಳಿ ಗ್ರಾಮದ ಸೈಟ್‌ಮನೆ ಪ್ರದೇಶದಲ್ಲಿ ವಾಸವಿದ್ದ ಸೀನಾ (50) ಸಾವನ್ನಪ್ಪಿರುವ ವ್ಯಕ್ತಿ ಎಂದು ಸಂಶಯಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಪತ್ನಿ ಅಂಬಿಕಾ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.

15 ವರ್ಷಗಳಿಂದ ಅಂಬಿಕಾ ಹಾಗೂ ಸೀನಾ ಕುನ್ನಳ್ಳಿಯ ಸೈಟ್‌ಮನೆಯಲ್ಲಿ ಜೀವನ ನಡೆಸುತ್ತಿದ್ದು, ಆದರೆ ಹಲವು ದಿವಸಗಳಿಂದ ಸೀನಾ ಮೂಡಿಗೆರೆಯಲ್ಲಿ ಮನೆ ಮಾಡಿಕೊಂಡು ವಾಸವಿದ್ದರು ಎನ್ನಲಾಗಿದೆ. ಸೋಮವಾರ ಸಂಜೆ ಕುನ್ನಳ್ಳಿ ಗ್ರಾಮದಲ್ಲಿ ಸೀನಾ ಅವರು ಕಾಣಿಸಿಕೊಂಡಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಆದರೆ ಮಂಗಳವಾರ ಮುಂಜಾನೆ 7ರ ಸುಮಾರಿಗೆ ಅಂಬಿಕಾ ತನ್ನ ಮನೆಯ ಪಕ್ಕದಲ್ಲಿದ್ದ ಕಾಫಿ ಗಿಡಗಳ ಬಳಿ ಟಯರ್‌ ಹಾಗೂ ಸೌದೆಗಳನ್ನು ಬಳಸಿ ಬೆಂಕಿ ಹಾಕಿದ್ದು, ಅನುಮಾನಗೊಂಡ ಗ್ರಾಮಸ್ಥರು ಸ್ಥಳಕ್ಕೆ ಭೇಟಿ ನೀಡಿದಾಗ, ಟಯರ್‌ ಒಳಗೆ ಮೃತದೇಹ ಇರುವುದು ಬೆಳಕಿಗೆ ಬಂದಿದೆ. ಗ್ರಾಮಸ್ಥರು ಈ ಬಗ್ಗೆ ವಿಚಾರಿಸಿದಾಗ, ಸುಟ್ಟು ಹಾಕುತ್ತಿರುವ ಶವವು ಸೀನನದ್ದೆಂದು ಹೇಳಿದ್ದು, ಕೂಡಲೇ ಸ್ಥಳೀಯರು ಮೂಡಿಗೆರೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry