ಸ್ಥಿರ ದೂರವಾಣಿ: ಭಾನುವಾರದ ಉಚಿತ ಕರೆ ಸೌಲಭ್ಯ ಇಲ್ಲ

7

ಸ್ಥಿರ ದೂರವಾಣಿ: ಭಾನುವಾರದ ಉಚಿತ ಕರೆ ಸೌಲಭ್ಯ ಇಲ್ಲ

Published:
Updated:
ಸ್ಥಿರ ದೂರವಾಣಿ: ಭಾನುವಾರದ ಉಚಿತ ಕರೆ ಸೌಲಭ್ಯ ಇಲ್ಲ

ಬೆಂಗಳೂರು: ಬಿಎಸ್‌ಎನ್‌ಎಲ್‌ ಸ್ಥಿರ ದೂರವಾಣಿ ಗ್ರಾಹಕರಿಗೆ ಪ್ರತಿ ಭಾನುವಾರ ನೀಡುತ್ತಿದ್ದ ಉಚಿತ ಕರೆ ಸೌಲಭ್ಯ ಫೆಬ್ರುವರಿ 1ರಿಂದ ಸ್ಥಗಿತಗೊಳ್ಳಲಿದೆ.

ಗ್ರಾಹಕರು ಪ್ರತಿ ಭಾನುವಾರ ಯಾವುದೇ ಕಂಪನಿ ನೆಟ್‌ವರ್ಕ್‌ಗಳಿಗೆ ಎಷ್ಟೇ ಕರೆ ಮಾಡಿದರೂ ಅದಕ್ಕೆ ಹಣ ಪಾವತಿಸ ಬೇಕಿರಲಿಲ್ಲ. 2016ರ ಆಗಸ್ಟ್‌ 15ರಂದು ಪ್ರಾರಂಭಿಸಲಾಗಿದ್ದ ಈ ಸೌಲಭ್ಯವನ್ನು ಈಗ ಹಿಂಪಡೆಯಲಾಗಿದೆ ಎಂದು ಬಿಎಸ್‌ಎನ್‌ಎಲ್‌ನ ಸಾರ್ವಜನಿಕ ಸಂಪರ್ಕ ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕ ಅಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry