ಬಂದ್‌ನಿಂದಾಗಿ ಬೆಂಗಳೂರು ವಿ.ವಿ ಪರೀಕ್ಷೆ ಮುಂದಕ್ಕೆ

7

ಬಂದ್‌ನಿಂದಾಗಿ ಬೆಂಗಳೂರು ವಿ.ವಿ ಪರೀಕ್ಷೆ ಮುಂದಕ್ಕೆ

Published:
Updated:

ಬೆಂಗಳೂರು: ಇದೇ 25ರ ಕರ್ನಾಟಕ ಬಂದ್‌ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಯಾವಾಗ ಪರೀಕ್ಷೆ: ಮೊದಲ ವರ್ಷದ ಬಿಎ/ಬಿಎಸ್ಸಿ/ಬಿಕಾಂ/ಬಿಬಿಎಂ ಪರೀಕ್ಷೆಗಳು ಫೆ. 8ರಂದು ಬೆಳಿಗ್ಗೆ 9.30ರಿಂದ 12.30, ಮೂರನೇ ವರ್ಷದ ಬಿಎ/ಬಿಎಸ್ಸಿ ಪರೀಕ್ಷೆಗಳು ಫೆ.5ರಂದು ಮಧ್ಯಾಹ್ನ 2ರಿಂದ 5, ಮೂರನೇ ವರ್ಷದ ಬಿಕಾಂ/ಬಿಬಿಎಂ ಪರೀಕ್ಷೆಗಳು ಜ 31ರ ಮಧ್ಯಾಹ್ನ 2ರಿಂದ 5, ಎರಡನೇ ವರ್ಷದ ಎಂಕಾಂ ಫೆ.8ರಂದು ಮಧ್ಯಾಹ್ನ 2.30ರಿಂದ 5.30 ಕ್ಕೆ ನಡೆಯಲಿವೆ.

ಎರಡನೇ ವರ್ಷದ ಎಂಎ/ಎಎಸ್ಸಿ ಪರೀಕ್ಷೆಗಳು ಫೆ. 2ರಂದು ಮಧ್ಯಾಹ್ನ 2.30ರಿಂದ 5.30, ಪಿಜಿ ಡಿಬಿಎ/ಡಿಆರ್‌ಎಂ/ಡಿಎಂಎಂ/ಡಿಎಚ್‌ಎ ಪರೀಕ್ಷೆಗಳು ಜ31ರಂದು ಮಧ್ಯಾಹ್ನ 2.30 ರಿಂದ 5.30ಕ್ಕೆ ನಡೆಯಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry