ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಯಲ್ಲಿ ಕೆಪಿಸಿಸಿ‌ ಉಪಾಧ್ಯಕ್ಷ ಬಿ.ಶಿವರಾಂ ಕೈವಾಡ?

7

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಯಲ್ಲಿ ಕೆಪಿಸಿಸಿ‌ ಉಪಾಧ್ಯಕ್ಷ ಬಿ.ಶಿವರಾಂ ಕೈವಾಡ?

Published:
Updated:
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಯಲ್ಲಿ ಕೆಪಿಸಿಸಿ‌ ಉಪಾಧ್ಯಕ್ಷ ಬಿ.ಶಿವರಾಂ ಕೈವಾಡ?

ಹಾಸನ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ದಿಢೀರ್ ವರ್ಗಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳ ನಡುವೆ ರಾಜಕೀಯ ಜಟಾಪಟಿಗೆ ನಾಂದಿಯಾಗಿದ್ದು, ಇದೀಗ ವೈರಲ್‌ ಆಗಿರುವ ಆಡಿಯೊ ಸಂಭಾಷಣೆ ಮತ್ತೊಂದು ತಿರುವು ನೀಡಿದೆ. 

ರೋಹಿಣಿ ಸಿಂಧೂರಿ ವರ್ಗಾವಣೆಗೆ ಕೆಪಿಸಿಸಿ‌ ಉಪಾಧ್ಯಕ್ಷ ಬಿ.ಶಿವರಾಂ ಅವರೂ ಕಾರಣರೂ ಎಂಬ ಅಂಶವನ್ನು ಈ ಆಡಿಯೊ ಬಹಿರಂಗ ಪಡಿಸುವಂತಿದೆ. ಸ್ಮಶಾನ ಭೂಮಿಗಾಗಿ ಹೋರಾಟ ಮಾಡಿದ್ದ ದಲಿತ ಮುಖಂಡ ಹಾಗೂ ಬೇಲೂರು ತಾಲೂಕು ಎಸ್‌ಸಿ ಮೋರ್ಚಾ ಕುಮಾರ್ ಎಂಬಾತನೊಂದಿಗೆ ಶಿವಾರಾಂ ಅವರು ನಡೆಸಿರುವ 4.4 ನಿಮಿಷದ ಆಡಿಯೋ ಸಂಭಾಷಣೆ ವೈರಲ್‌ ಆಗಿದೆ.

ಬಿ.ಶಿವರಾಂ ಮತ್ತು ಕುಮಾರ್ ನಡುವಿನ ಸಂಭಾಷಣೆ ವಿವರ:

ಬಿ.ಶಿವರಾಂ: ನಿನ್ ‌‌ವಿಷ್ಯ ಎಲ್ಲಿಗೆ ಹೋಯ್ತು ಅಂದ್ರೆ ಬಲೀನೆ ತೆಗೋತು ಡಿಸಿನಾ. ನಾನೇನ್ ಹೇಳಿದ್ದೆ ಅವತ್ ‌ನಿಂಗೆ? ನಾನ್ ಕೈ ಹಾಕಿದ್‌ ಮೇಲೆ‌ ಬಿಡೋಕಿಲ್ಲ ಯಾವುದನ್ನು.

ಎಸ್ಸಿ ಮೋರ್ಚಾ ಅಧ್ಯಕ್ಷ‌ ಕುಮಾರ್: ಸತ್ಯಕಣಣ್ಣ ಅವತ್ತೇ ಎಲ್ಲರೂ ಹೇಳಿದ್ರು, ಶಿವರಾಮಣ್ಣ ಕೈಹಾಕಿದ್ದು, ಯಾವುದೂ ಸುಳ್ಳಾಗಲ್ಲ, ಸಕ್ಸಸ್ ಆಗುತ್ತೆ ಅಂತ.

ಬಿ.ಶಿವರಾಂ: ಈಗ ಆ ಬೋಲ್ಟ್ ನಟ್ ಮಾಡೋನು ಹೇಗೆ ಜಾಗ ತೆಗೋತಾನೆ‌ ನೋಡ್ತಿನಿ‌ ಬಾ

ಕುಮಾರ್:  ಬರ್ತೀನಿ ಕಣಣ್ಣ, ಇವತ್ತು ಎಲ್ಲರೂ ಹಾಸನಕ್ಕೆ ಹೋಗನ ಅಂತ ಇದ್ವಿ. ಹೊಸ ಡಿಸಿ ಸ್ವಾಗತ ಮಾಡಿಸಿ ಏನಾದರೂ ಕೊಟ್ಟು ಹೋಗೋಣ ಅಂತ.

ಶಿವರಾಂ:ಇನ್ನು ಬಂದಿಲ್ಲ ಬಾ. ಬಂದ್ ಮೇಲೆ‌ ಹೋಗಬಹುದು ಬಾ
ಕುಮಾರ್: ಅದೇ ಅದೇ ಅಣ್ಣ.
ಶಿವರಾಂ:ನಿಮ್ಮನ್ನೆಲ್ಲ ಜೈಲಿಗೆ ಹಾಕ್ಸಿತ್ತು ಆ ಯಮ್ಮ ಹೌದಾ?
ಕುಮಾರ್: ಹೂ ಅಣ್ಣ, ಅದೇನೆ ಎಲ್ಲರ್ಗೂ ಹೊರಡಿಸುತ್ತೇನೆ.
ಶಿವರಾಂ:ನಿನ್ ಇಷ್ಯು  ತೆಗೋಂಡಾಗ್ಲೆ ಹಂಗೇ‌ ಸಿಎಂ ಮುಖ ಕಪ್ಪಗಾಯ್ತು.
ಕುಮಾರ್:ಅದೇ ಅಣ್ಣ
ಶಿವರಾಂ: ನಡುಗೇ ಹೋದ್ರು ಸಿಎಂ ಗೊತ್ತಾ?
ಕುಮಾರ್: ಅಣ್ಣ ಈಗ ಯಾವಾಗ ಸಮಾವೇಶ ಇಟ್ಕೋತಿರಾ
ಶಿವರಾಂ:ನೀನ್ ಯಾವಾಗ್ ಮಾಡ್ತಿ ಅಂತ ಹೇಳು ಆವಾಗ್ ಮಾಡ್ತಿನಿ,
ಕುಮಾರ್: ನೀವ್ ಯಾವಾಗ್ ರೆಡಿ ಅಂತಿರಾ ಆವಾಗ್ ಅಣ್ಣ ಎಲ್ಲರ ಸಮ್ಮುಖದಲ್ಲಿ ‌ನಾನು ಇದಾಗ್ ಬೇಕು.
ಶಿವರಾಂ: ಶುಕ್ರವಾರ ಮಾಡದ
ಕುಮಾರ್: ಹೂಂ ರೆಡೀ ಅಣ್ಣ.
ಶಿವರಾಂ:ಎಷ್ಟು ಜನ‌ ಸೇರಿಸ್ತಿಯಾ?
ಕುಮಾರ್:ಸುಮಾರು ಒಂದು‌ ಸಾವಿರ‌ ಜನ‌ ಸೇರಿಸ್ಕೊಳನಾ ಅಂತ ಇದೀನಿ ಅಣ್ಣ, ಎಲ್ಲಾದ್ರು ಹೊರಗಡೆ ಜಾಗದಲ್ಲಿ.
ಶಿವರಾಂ:ಎಲ್ಲಿ ಸೇರಿಸ್ತಿಯಾ ಎಲ್‌ ಮಾಡನ ಹೇಳು?
ಕುಮಾರ್: ಪ್ಲೇಸ್ ಈಗ ಸೆಲೆಕ್ಟ್ ಮಾಡ್ತಿನಿ ಅಣ್ಣ ಎಲ್ಲರ್ನೂ ಸೇರ್ಸಿ ನಿಮ್‌ ಸಮ್ಮುಖದಲ್ಲೇ ಇದಾಗಬೇಕು
ಶಿವರಾಂ: ಕನ್ನಾಯಕನಹಳ್ಳಿಯಲ್ಲಿ ಮಾಡ್ತೀಯಾ? ಮಾಡಬಹುದಣ್ಣ, ಅಲ್ಲೂ ಅನುಕೂಲ ಆಗುತ್ತೆ.
ಶಿವರಾಂ: ರೆಡೀನಾ?
ಕುಮಾರ್: ಹೂಂ ಅಣ್ಣ
ಶಿವರಾಂ: ಶುಕ್ರವಾರ,ಕನ್ನಾಯಕನಹಳ್ಳಿ ಓಕೆನಾ?
ಕುಮಾರ್: ಓಕೆ ಅಣ್ಣ
ಶಿವರಾಂ: ಈಗ್ಲೆ ಫಿಕ್ಸ್ ಮಾಡ್ಬಿಟ್ಟಿದೀವಿ
ಕುಮಾರ್: ಸರಿ
ಶಿವರಾಂ :ರೆಡೀ ಮಾಡು ಮತ್ತೆ ಜೋರಾಗಿ.
ಕುಮಾರ್: ಸರಿ ಕಣಣ್ಣ
ಶಿವರಾಂ: ನೋಡ್ ಅವತ್ತು ಭಾಷಣ ಮಾಡ್ತಿನಿ ಹೇಳ್ತಿನಿ.ನಿಮಗೆ‌ ಏನ್ ರಕ್ಷಣೆ ಬೇಕೋ ಕೊಡ್ತಿನಿ. ಅಂತ,ಅವ್ನ ಯಾವನೋ‌ ಬೋಲ್ಟ್‌ನಟ್ ನವನೂ ಅವನೂ ಜಾಗ ತೆಗೊಂಡು ಕಟ್ಟಿ ಅದೇನ್‌ಮಾಡ್ತಾನೆ ನಾನ್ ನೊಡ್ತಿನಿ ನಡಿ
ಕುಮಾರ್: ಸರಿ ಕಣಣ್ಣ
ಶಿವರಾಂ: ಈಗ ಹೆದ್ರಬೇಡ ಇನ್ನ ಯಾವ್ ನನ್ ಮಗಾನು ನಿಂಗೆ‌ ಮುಟ್ಟಕಾಗಲ್ಲ ತಿಳ್ಕೊ.
ಕುಮಾರ್:ಸರಿ ಕಣಣ್ಣ ಶಿವರಾಂ ಅವನು ಲೊಕೇಶ‌ ಗೀಕೇಶ ,ಸರ್ಕಲ್ ಇನ್‌ಸ್ಪೆಕ್ಟರ್‌ ಎಸ್ಪಿ ಗಿಸ್ಪಿ ಎಲ್ಲನೂ ನೋಡನ,ಈಗ ಅವರಿಗೆ ಅರ್ಥ ಆಗೋಯ್ತು ಮುಟ್ಟಿ ಅಪರಾದ ಮಾಡ್ದೊ ಅಂತ ಡಿಸಿ ಅನ್ತಾ ಇದ್ರಂತೆ‌ ಅದೊಂದ್‌ತಪ್ಪು ಮಾಡ್ದೆ ನಾನು ಅಂತ.
ಕುಮಾರ್: ಹೂಂ
ಶಿವರಾಂ:ಯಾರೂ ಕೇಳುವರಿಲ್ಲ ಅಂತ ಅಂದುಕೊಂಡಿದ್ರು ಅವ್ರು.
ಕುಮಾರ: ಹೂ ಅಣ್ಣ
ಶಿವರಾಂ:ಯಾಕೆಂದ್ರೆ‌ ಎಂಎಲ್ಎ ಫೋನ್ ಮಾಡಿದ್ರೆ ಟಕ್‌ ಅಂತ ಪೊನ್ ಇಡೊವ್ರಂತೆ ಕುಕ್ಕೊವ್ಳಂತೆ ಹಂಗೆಯಾ,
ಕುಮಾರ್:  ಸರಿಯಾದ್ ಎಂಎಲ್ ಎ ಆಗಿದ್ರೆ ಸರಿಯಾಗದು.ನಿಮ್ಮಂತವರು ಕಡಕ್ ಆಗಿದ್ರೆ ಅದ್ಕೆ ಉತ್ತರ
ಹಾಂ
ಶಿವರಾಂ: ನಮ್ದೆ‌ ಆದ ವಿಚಾರಕ್ಕೆ ನೀವು ಹೆಜ್ಜೆಯಿಟ್ಟ ಮೇಲೆ‌ ಹೋರಾಟ ಮಾಡ್ತಿರಿ,ಎಲ್ಲಿಗಾದ್ರೂ ಹೋಗ್ತಿರಿ.
ಶಿವರಾಂ:ನಿಮ್ಮೂರ ಹೆಣ್ ಮಕ್ಳಿಗೆ‌ಮಾತ್ ಕೊಟ್ಟಿದ್ದೀನಿ ತಮಾಷೆನಾ ಏನಯ್ಯ
ಕುಮಾರ್: ಹೌದಣ್ಣ
ಶಿವರಾಂ: ನಾಳೆ ಯಾರ್ ನಂಮ್ತಾರೆ ನಮ್ಮನ್ನ
ಕುಮಾರ್: ಸತ್ಯ ಅಣ್ಣ ಶಿವರಾಂ ಈಗ ಪ್ರದಿ ನೀನು ಸೇರ್ಕೊಂಡು ಢಣಾಯಕನಹಳ್ಳಿಲಿ ಜೋರ್ ಸಮಾವೇಶ ನಡೆಸಬೇಕು. ನಿನ್ ಕಡೆಯಿಂದ ಒಂದ್ ಸಾವಿರ್ ಜನ.
ಕುಮಾರ್: ಆಯ್ತಣ್ಣ
ಶಿವರಾಂ: ಪ್ರದಿ ಕೈಲಿ ಮಾತಾಡ್ಕೊ
ಕುಮಾರ್:‌ ಆಯ್ತಣ್ಣ ನಾಯಕರೇ‌ ನಮಸ್ಕಾರ

ಮೂರನೇ ವ್ಯಕ್ತಿ: ಎಲ್ಲಿದಿಯ.. ನಾರಾಯಣ್ಪುರದು ಕಾರ್ಯಕ್ರಮ ಇಟ್ಕೊಂಡಿದಿವಿ ಶುಕ್ರವಾರ.ಎಷ್ಟ್ ಜನ ಬರ್ತಾರೆ
ಕುಮಾರ್: ಅಂದ್ರೆ ನಾವು ಎಷ್ಟು ಜನಾ ಅನ್ನೊಕಿಂತ‌ ಶಕ್ತಿ ತೋರಿಸಬೇಕು.ಜನದ್ ಲೆಕ್ಕಾಚಾರ ಅಲ್ಲ.
ಮೂರನೇ ವ್ಯಕ್ತಿ: ಮತ್ತೆ ಹೆಂಗೆ ಶಕ್ತಿ ತೋರಿಸ್ತಿಯಾ
ಕುಮಾರ್: ನಾನ್ ತೋರಿಸ್ತಿನಿ ಅದೇ‌ರೀತಿ ಬೇರೆ.ಸಂಜೆ‌ಹೊತ್ತು ಮಾತಾಡ್ ತಿನಿ
ಮೂರನೇ ವ್ಯಕ್ತಿಃ ಹೂಂ
ಕುಮಾರ್: ಇವಾಗ್ ಏನ್‌ಮಾತಾಡಿದಿವಿ ಅದನ್ನೆಲ್ಲ ನಮ್ ಆತ್ಮೀಯರಿಗೆ ವರ್ಗಾವಣೆ ಮಾಡಿ
ಮೂರನೇ ವ್ಯಕ್ತಿಃ ಸುಮ್ನೆ‌ ಹೇಳದಲ್ಲಪ್ಪ ನೀನ್‌ ಜನ ಸೇರಿಸ್ಲಿಲ್ಲ ಅಂದ್ರೆ ಮರ್ಯಾದೆ ಹಾಳಾಗುತ್ತೆ.
ಕುಮಾರ್:  ಮರ್ಯಾದೆ ಹಾಳ್ ಮಾಡ್ಕೊಬಾರ್ದು
ಮೂರನೇ‌ ವ್ಯಕ್ತಿಃ ಹೂ ಮತ್ತೆ ಸುಮ್ನೆ ಮಾತಾಡ್ಬೇಡ ಅಂಗೆಲ್ಲ
ಕುಮಾರ್: ಮರ್ಯಾದೆ ಹಾಳ್‌ಮಾಡ್ಕೊಬಾರ್ದು ಎಂಎಲ್ ಎ ಮಾಡ್ಬೇಕು ಅಂತ ಹೋರಾಟ‌ ಮಾಡತಿರೋದು. ಶಿವರಾಮಣ್ಣ ಈ ಜಿಲ್ಲೆಲಿ ಹಾಸನ ಜಿಲ್ಲೆಯ ಬೇಲೂರು ತಾಲೂಕಲ್ಲಿ ಪ್ರಬಲರಾಗಿರುವಂತವರು ಎಂಎಲ್ಎ ಆಗಬೇಕು. ಯಾಕೆಂದ್ರೆ ಎಂತವರಾದ್ರು ಬುಜ ತಟ್ಟಿ ನಿಲ್ಲಬೇಕು.
ಮೂರನೇ ವ್ಯಕ್ತಿ: ಆಮೇಲೆ‌ ಈಗೇನ್ ಮಾಡ್ತಿಯ
ಕುಮಾರ್: ಮಾಡ್ತಿನಿ ಏರ್ಪಾಟ್ ಮಾಡ್ತಿನಿ.
ಮೂರನೇ ವ್ಯಕ್ತಿ: ಪೋನ್ ಮಾಡು ನಂಗೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry