ರಾಗಿಗೆ ₹ 2,300 ಬೆಂಬಲ ಬೆಲೆ

7

ರಾಗಿಗೆ ₹ 2,300 ಬೆಂಬಲ ಬೆಲೆ

Published:
Updated:

ಮೈಸೂರು: ರೈತರು 2017-18ನೇ ಸಾಲಿನ ಖಾರೀಫ್ ಋತುವಿನಲ್ಲಿ ಬೆಳೆದ ರಾಗಿಯನ್ನು ₹ 2,300 ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಜಿಲ್ಲಾಧಿಕಾರಿ ಡಿ. ರಂದೀಪ್ ಆದೇಶಿಸಿದ್ದಾರೆ.

ಜಿಲ್ಲಾ ಕಾರ್ಯಪಡೆಯ ತೀರ್ಮಾನದಂತೆ ಗುಣಮಟ್ಟದ ರಾಗಿಯನ್ನು ಬೆಂಬಲ ಬೆಲೆ ಕೇಂದ್ರಗಳ ಮೂಲಕ ಮಾರಾಟ ಮಾಡಲು ಕೋರಲಾಗಿದೆ. ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿಸಬಾರದು ಎಂದು ವರ್ತಕರಿಗೆ ಸೂಚಿಸಿದ್ದಾರೆ.

ಕಡಿಮೆ ಬೆಲೆಗೆ ಖರೀದಿಸುವ ವರ್ತಕರ ವಿರುದ್ಧ ಕ್ರಮ ಜರುಗಿಸಬೇಕು ಮತ್ತು ವರ್ತಕರು ಕಡ್ಡಾಯವಾಗಿ ಎಲೆಕ್ಟ್ರಾನಿಕ್‌ ತೂಕಯಂತ್ರಗಳನ್ನು ಬಳಸಬೇಕು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯದರ್ಶಿಗೆ ಆದೇಶಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry