ದಂಡಿಮಾರಮ್ಮನ ಹಬ್ಬ

7

ದಂಡಿಮಾರಮ್ಮನ ಹಬ್ಬ

Published:
Updated:

ಮಳವಳ್ಳಿ: ಪಟ್ಟಣದಲ್ಲಿ ಜ. 26, 27ರಂದು ನಡೆಯುವ ಸಿಡಿ ಹಬ್ಬದ ಪೂರ್ವವಾಗಿ ಮಂಗಳವಾರ ದಂಡಿನ ಮಾರಮ್ಮನ ಹಬ್ಬವನ್ನು ಭಕ್ತಿಪೂರ್ವಕವಾಗಿ ಆಚರಿಸಲಾಯಿತು.

ಹಬ್ಬದ ಅಂಗವಾಗಿ ಪಟ್ಟಣದ ಹೊರವಲಯದಲ್ಲಿರುವ ದಂಡಿನಮಾರಮ್ಮನ ವಿಗ್ರಹಕ್ಕೆ ವಿವಿಧ ಬಗೆಯ ಹೂವುಗಳಿಂದ ಅಲಂಕಾರಗೊಳಿಸಲಾಗಿತ್ತು. ಬೆಳಿಗ್ಗೆಯಿಂದಲೇ ದಂಡಿನಮಾರಮ್ಮ ದೇವಿಗೆ ವಿಶೇಷ ಪೂಜಾಕೈಂಕರ್ಯಗಳನ್ನು ನಡೆಸಲಾಯಿತು. ಮಧ್ಯಾಹ್ನದ ನಂತರ ಪಟ್ಟಣದ ಪ್ರತಿ ಮನೆಯ ಮಹಿಳೆಯರು ತಂಬಿಟ್ಟು ಆರತಿಯೊಂದಿಗೆ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದರು.

ಪಟ್ಟಣದ ಗಂಗಾಮತ ಬಡಾವಣೆಯಲ್ಲಿರುವ ಮೂಲ ದೇವಾಲಯದಲ್ಲಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ಅಲಂಕೃತಗೊಳಿಸಿದ ಎತ್ತಿನಗಾಡಿಯಲ್ಲಿ ಕೂರಿಸಿ ತಮಟೆ ವಾದ್ಯಗಳೊಡನೆ ಮೆರವಣಿಗೆ ಮೂಲಕ ಮದ್ದೂರು ರಸ್ತೆಯಲ್ಲಿರುವ ದಂಡಿಮಾರಮ್ಮನ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು.

ಪಟ್ಟಣ, ಮಾರೇಹಳ್ಳಿ ತಮ್ಮಡಹಳ್ಳಿ, ಬಸವನಪುರ, ಉಗ್ರಾಣಪುರದೊಡ್ಡಿ, ಮಾರೇಹಳ್ಳಿ, ಬುಗತಗಹಳ್ಳಿ, ಅಂಚೇದೊಡ್ಡಿ ಗ್ರಾಮಗಳ ಜನತೆ ಪೂಜೆ ಸಲ್ಲಿಸಿ ಸರದಿಯಲ್ಲಿ ಬಂದು ದಂಡಿನ ಮಾರಮ್ಮ ದರ್ಶನ ಪಡೆದರು.

ಹಲಗೂರು (ಮಳವಳ್ಳಿ): ತಾಲ್ಲೂಕಿನ ದಳವಾಯಿಕೋಡಿಹಳ್ಳಿಯಲ್ಲಿ ಸೋಮವಾರ ಭತ್ತದ ಹುಲ್ಲಿನ ಮೆದೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ ಸಂಪೂರ್ಣವಾಗಿ ಭಸ್ಮವಾಗಿದೆ.

ಗ್ರಾಮದ ಚಿಕ್ಕಲಿಂಗೇಗೌಡರ ಪುತ್ರ ಸುರೇಶ್‌ ಅವರು ತಮ್ಮಜಮೀನಿನಲ್ಲಿ ಹುಲ್ಲಿನ ಮೆದೆ ಹಾಕಿದ್ದರು. ‘ಇದರಿಂದ ₹ 30 ಸಾವಿರ ನಷ್ಟವಾಗಿದ್ದು, ಪರಿಹಾರ ನೀಡಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry