ಕೋಮು ಪ್ರಚೋದನೆ ಸಂದೇಶ; ಶಂಕರ ನಾಯ್ಕ ಬಂಧನ

6

ಕೋಮು ಪ್ರಚೋದನೆ ಸಂದೇಶ; ಶಂಕರ ನಾಯ್ಕ ಬಂಧನ

Published:
Updated:

ಕಾರವಾರ: ‘ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆ’ ಆರೋಪದಡಿ ಭಟ್ಕಳದ ಚೌಥನಿಯ ನಿವಾಸಿ ಹಾಗೂ ಶ್ರೀರಾಮ ಸೇನೆಯ ಉತ್ತರ ಪ್ರಾಂತ ವಕ್ತಾರ ಶಂಕರ ನಾಯ್ಕ ಎಂಬುವವರನ್ನು ಇಲ್ಲಿನ ಪೊಲೀಸರು ಸೋಮವಾರ ನಗರದ ಭದ್ರ ಹೋಟೆಲ್‌ನಲ್ಲಿ ಬಂಧಿಸಿದ್ದಾರೆ.

‘ಜಿಲ್ಲೆಯಲ್ಲಿ ನಡೆದ ಗಲಭೆಯ ವೇಳೆ ಸಾಮಾಜಿಕ ಜಾಲತಾಣದಲ್ಲಿ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಸಂದೇಶಗಳನ್ನು ಹಾಕಿರುವ ಕುರಿತಾಗಿ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಕುರಿತಂತೆ ಕಾರವಾರ ನಗರ ಠಾಣೆಯ ಪಿಎಸ್ಐ ನವೀನ್‌ಕುಮಾರ್ ನಾಯ್ಕ, ಅಂಕೋಲಾ ಪಿಎಸ್ಐ ಶ್ರೀಧರ್ ಅವರ ಸಹಾಯದೊಂದಿಗೆ ಗೋಕರ್ಣ ಪಿಎಸ್‌ಐ ಸಂತೋಷ್‌ಕುಮಾರ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಸದ್ಯ ಅವರನ್ನು ಕುಮಟಾದಲ್ಲಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ’ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry