ಶಬ್ದ ಮಾಡದೇ ನೂಡಲ್ಸ್ ತಿನ್ನಲು

7

ಶಬ್ದ ಮಾಡದೇ ನೂಡಲ್ಸ್ ತಿನ್ನಲು

Published:
Updated:
ಶಬ್ದ ಮಾಡದೇ ನೂಡಲ್ಸ್ ತಿನ್ನಲು

ರುಚಿಭರಿತ ಆಹಾರ ಸೇವಿಸುವಾಗ ಅದನ್ನು ಆಸ್ವಾದಿಸುತ್ತಾ ಬಾಯಿ ಚಪ್ಪರಿಸುತ್ತಾ ತಿನ್ನುವುದು ಬಹುಮಂದಿಯ ರೂಢಿ. ಆದರೆ ನೂಡಲ್ಸ್ ವಿಷಯವೇ ಬೇರೆ.

ಫೋರ್ಕ್‌ನಿಂದ ಎತ್ತಿ ಬಾಯಿಗೆ ಎಳೆದುಕೊಳ್ಳಲು ಸರಬರನೆ ಶಬ್ದ ಮಾಡಲೇಬೇಕು. ಬೇಕೋ ಬೇಡವೋ ಶಬ್ದವಂತೂ ಆಗೇ ಆಗುತ್ತದೆ.

ಈ ಶಬ್ದ ಜಪಾನ್‌ನಲ್ಲಿ ಭಾರೀ ಸುದ್ದಿ ಮಾಡಿತ್ತು. ಅಲ್ಲಿ ನೂಡಲ್ಸ್‌ ತಿನ್ನುವವರೇ ಹೆಚ್ಚಿರುವುದರಿಂದ ಬಹುಮಂದಿ ಸೇರಿ ನೂಡಲ್ಸ್‌ ತಿನ್ನುವ ಕಡೆ ಇದು ತುಂಬಾ ಕಿರಿಕಿರಿಯನ್ನೂ ಉಂಟು ಮಾಡಿತ್ತು. ತಾವು ತಿನ್ನುವಾಗಲೂ ಮತ್ತೊಬ್ಬರು ತಿನ್ನುವಾಗಲೂ ಇದು ಮುಜುಗರವನ್ನೂ ತಂದಿತ್ತು.

ಆದರೆ ಏನು ಮಾಡುವುದು? ಶಬ್ದವಿಲ್ಲದೇ ತಿನ್ನುವುದೂ ಕೆಲವರಿಗೆ ಸಾಧ್ಯವಾಗದ ಸಂಗತಿ. ಈ ಸಮಸ್ಯೆಯನ್ನು ಮನಗಂಡೇ ರಾಮೆನ್ ನೂಡಲ್ಸ್ ತಯಾರಕ ನಿಸ್ಸಿನ್ ಕಂಪನಿ, ಹೈಟೆಕ್ ಫೋರ್ಕ್ ಅನ್ನು ತನ್ನ ಗ್ರಾಹಕರಿಗೆ ಸಿದ್ಧಪಡಿಸಿತು.

ಅದರ ಹೆಸರು ಒಟೊಹಿಕೊ ಫೋರ್ಕ್. ಸ್ವಲ್ಪ ದಪ್ಪಗಿರುವ ಈ ಫೋರ್ಕ್‌ನಲ್ಲಿ ಸೆನ್ಸರ್‌ಗಳಿವೆ. ಇದಕ್ಕೆಂದೇ ಆ್ಯಪ್ ಇದೆ. ಅದನ್ನು ಸ್ಮಾರ್ಟ್‌ಫೋನ್‌ಗೆ ಸಂಪರ್ಕ ಕಲ್ಪಿಸಿಕೊಂಡರೆ ಸಾಕು.

ನೂಡಲ್ಸ್ ಹೀರುವ ಶಬ್ದವನ್ನು ಆ ಸೆನ್ಸರ್ ಗ್ರಹಿಸಿ ಆ್ಯಪ್‌ ಮೂಲಕ ನಿಮ್ಮ ಸ್ಮಾರ್ಟ್‌ಫೋನಿಗೆ ತಿಳಿಸುತ್ತದೆ. ಆ ಕ್ಷಣವೇ ಆ್ಯಪ್‌ನಲ್ಲಿನ ಮತ್ತೊಂದು ಸುಮಧುರ ಸ್ವರ ಹೊರಡುತ್ತದೆ.

ಆಗ ನೂಡಲ್ಸ್ ಹೀರುವ ಶಬ್ದ ಅದರಲ್ಲಿ ಮರೆಯಾಗುತ್ತದೆ. ಇದೇ ಈ ಫೋರ್ಕ್ ಹಿಂದಿನ ಚಮತ್ಕಾರ! ಆದರೆ ಇದರ ಬೆಲೆ (₹8291) ಕೇಳಿದರೆ ನೂಡಲ್ಸ್‌ ತಿನ್ನುವ ಶಬ್ದವನ್ನೂ ಮೀರಿಸುವ ಉದ್ಗಾರ ಹೊರಡುವುದಂತೂ ಗ್ಯಾರಂಟಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry