107 ಹೋಟೆಲ್‌ಗಳ ಮೇಲೆ ದಾಳಿ

7

107 ಹೋಟೆಲ್‌ಗಳ ಮೇಲೆ ದಾಳಿ

Published:
Updated:
107 ಹೋಟೆಲ್‌ಗಳ ಮೇಲೆ ದಾಳಿ

ಬೀದರ್: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ನಗರದ 107 ಹೋಟೆಲ್‌ಗಳ ಮೇಲೆ ದಾಳಿ ನಡೆಸಿ ಆಹಾರ ಸುರಕ್ಷತೆ ನಿಯಮ ಉಲ್ಲಂಘಿಸಿದ ಹೋಟೆಲ್‌ಗಳ ಮಾಲೀಕರಿಗೆ ದಂಡ ವಿಧಿಸಿದರು.

ನಗರದ ವಿವಿಧೆಡೆಯ ಹೋಟೆಲ್‌, ರೆಸ್ಟೊರೆಂಟ್‌, ಬಾರ್‌ ಆ್ಯಂಡ್‌ ರೆಸ್ಟೊರೆಂಟ್‌ ಹಾಗೂ ಬೀದಿ ಬದಿಯ ಆಹಾರ ಮಾರಾಟ ಮಳಿಗೆಗಳ ಮೇಲೆ ದಾಳಿ ಮಾಡಿ ಒಟ್ಟು ₹ 93,900 ದಂಡ ವಸೂಲಿ ಮಾಡಿದರು. ದಾಳಿ ವೇಳೆ ಗುಣಮಟ್ಟದ ಬಗೆಗೆ ಅನುಮಾನ ಬಂದ ಕಾರಣ 6 ಮಾದರಿಯ ಆಹಾರ ಪದಾರ್ಥಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಯಿತು.

ಪ್ರಾಧಿಕಾರದ ಜಿಲ್ಲಾ ಅಂಕಿತ ಅಧಿಕಾರಿ ಡಾ. ಶಿವಶಂಕರ ಬಿ. ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಗರಸಭೆಯ ಪರಿಸರ ಎಂಜಿನಿಯರ್ ರವೀಂದ್ರ ಕೆ., ಆರೋಗ್ಯ ಅಧಿಕಾರಿ ಗಿರೀಶಕುಮಾರ, ಎಂ.ಎ. ಹಫೀಜ್, ಸುಭಾಷ, ಅಶೋಕ ದಫೇದಾರ್ ಕಾರ್ಯಾಚರಣೆ ನಡೆಸಿದೆರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry