ಯುವಕರು ಗ್ರಾಮದ ಅಭಿವೃದ್ಧಿಗೆ ಒತ್ತು ನೀಡಬೇಕು

7

ಯುವಕರು ಗ್ರಾಮದ ಅಭಿವೃದ್ಧಿಗೆ ಒತ್ತು ನೀಡಬೇಕು

Published:
Updated:
ಯುವಕರು ಗ್ರಾಮದ ಅಭಿವೃದ್ಧಿಗೆ ಒತ್ತು ನೀಡಬೇಕು

ಮುಳಗುಂದ: ಯುವಕರು ರಚನಾತ್ಮಕ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಗ್ರಾಮದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು. ಇದರಿಂದ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು.

ಇಲ್ಲಿಗೆ ಸಮೀಪದ ಸೊರಟೂರ ಗ್ರಾಮದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯ್ತಿ ಗದಗ, ರಾಷ್ಟ್ರೀಯ ಸೇವಾ ಯೋಜನೆ ಕೋಶ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಆದರ್ಶ ಶಿಕ್ಷಣ ಸಮಿತಿ, ಸ್ನಾತಕೋತ್ತರ ಕೇಂದ್ರ ಗದಗ ಹಾಗೂ ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯುವ ಸ್ಪಂದನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ 2017–18 ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

‘ಹಳ್ಳಿ ಮಹಿಳೆಯರಿಗೆ ಅಗೌರವ ತರುವಂತಹ ಬಯಲು ಬರ್ಹಿದೆಸೆ ನಿಲ್ಲಿಸಿ. ಶೌಚಗೃಹಗಳನ್ನು ಉಪಯೋಗಿಸುವಂತೆ ಗ್ರಾಮದ ಜನತೆಯಲ್ಲಿ ಜನ ಜಾಗೃತಿ ನಡೆಸಿದ ರಾಷ್ಟ್ರೀಯ ಸೇವಾ ಯೋಜನೆಯ ಕೆಲಸ ಪ್ರಶಂಸನಿಯ. ಜ 30 ರೊಳಗೆ ರಾಜ್ಯದ 22 ಜಿಲ್ಲೆಗಳು ಸಂಪೂರ್ಣ ಬಯಲು ಬರ್ಹಿದೆಸೆ ಮುಕ್ತವಾಗಲಿವೆ’ ಎಂದು ತಿಳಿಸಿದರು.

ಎನ್.ಎಸ್.ಎಸ್. ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಎಂ.ಬಿ. ದಳಪತಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಗದಗ ಜಿಲ್ಲೆಯ 30 ಪದವಿ ಮಹಾವಿದ್ಯಾಲಯದ ಎನ್.ಎಸ್.ಎಸ್.ನ 1500 ಸ್ವಯಂ ಸೇವಕರು ಗ್ರಾಮದ ಜನರ ಸಹಕಾರದೊಂದಿಗೆ ಗ್ರಾಮದಲ್ಲಿ ಸ್ವಚ್ಛತೆ ಹಾಗೂ ಶೌಚಾಲಯ ಬಳಸುವ ಕುರಿತು ಜನ ಜಾಗೃತಿ ನಡೆಸಿದ್ದು ದೇಶದಲ್ಲೇ ಪ್ರಥಮವಾಗಿದೆ. ಇದನ್ನು ಹಾವೇರಿ ಜೆಲ್ಲೆಗೂ ವಿಸ್ತರಿಸುವ ಗುರಿ ಇದೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ವಾಸಣ್ಣ ಕುರಡಗಿ, ಸಿಇಒ ಮಂಜುನಾಥ ಚವ್ಹಾಣ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೃಷ್ಣಗೌಡ ಪಾಟೀಲ, ಇಒ ಎಚ್.ಎಸ್.ಜನಗಿ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ರಾಜುಗೌಡ ಪಾಟೀಲ, ಎಚ್.ವೈ. ಪೂಜಾರ, ತಾಲ್ಲೂಕು ಪಂಚಾಯ್ತಿ ಸದಸ್ಯೆ ರೇಖಾ ಭೋಳನವರ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶಾರವ್ವ ಜಂಗವಾಡ, ಉಪಾಧ್ಯಕ್ಷೆ ಜನ್ನತಬಿ ಅಬ್ಬಿಗೇರಿ, ಎನ್.ಎಸ್.ಎಸ್. ನೋಡಲ್ ಅಧಿಕಾರಿ ವಿ.ಎಚ್.ಕೊಳ್ಳಿ, ಸಂಯೋಜಕ ಟಿ.ಎಸ್.ಗೌಡರ, ನೀಲಗಿರಿಗೌಡ ಪಾಟೀಲ, ಉಲ್ಲಾಸರಾವ್ ಕುಲಕರ್ಣಿ, ತಿರಕಪ್ಪ ಭೋಳನವರ, ಶಿವಾನಂದ ಮಾದಣ್ಣವರ, ಡಾ. ಪ್ರಮೋದ ಇನಾಮದಾರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry