3 ಸಾವಿರ ಚಿತ್ರಮಂದಿರಗಳಲ್ಲಿ ‘ಪದ್ಮಾವತ್‌’ ಬಿಡುಗಡೆಗೆ ಸಿದ್ಧತೆ: ಮುಂಬೈ, ಅಹಮದಾಬಾದ್‌, ಹರಿಯಾಣದಲ್ಲಿ ಪ್ರತಿಭಟನೆ

7

3 ಸಾವಿರ ಚಿತ್ರಮಂದಿರಗಳಲ್ಲಿ ‘ಪದ್ಮಾವತ್‌’ ಬಿಡುಗಡೆಗೆ ಸಿದ್ಧತೆ: ಮುಂಬೈ, ಅಹಮದಾಬಾದ್‌, ಹರಿಯಾಣದಲ್ಲಿ ಪ್ರತಿಭಟನೆ

Published:
Updated:
3 ಸಾವಿರ ಚಿತ್ರಮಂದಿರಗಳಲ್ಲಿ ‘ಪದ್ಮಾವತ್‌’ ಬಿಡುಗಡೆಗೆ ಸಿದ್ಧತೆ: ಮುಂಬೈ, ಅಹಮದಾಬಾದ್‌, ಹರಿಯಾಣದಲ್ಲಿ ಪ್ರತಿಭಟನೆ

ಮುಂಬೈ: ದೇಶದ ಸುಮಾರು 3 ಸಾವಿರ ಚಿತ್ರಮಂದಿರಗಳಲ್ಲಿ ಗುರುವಾರ ‘ಪದ್ಮಾವತ್‌’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ನಡುವೆ ಅಹಮದಾಬಾದ್‌, ಮುಂಬೈ ಹಾಗೂ ಮೀರತ್‌ ಸೇರಿ ಹಲವು ಕಡೆ ಚಿತ್ರ ಬಿಡುಗಡೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ.

‘ಪದ್ಮಾವತ್‌’ ಚಲನಚಿತ್ರವನ್ನು ದೇಶದಾದ್ಯಂತ ಬಿಡುಗಡೆ ಮಾಡಲು ಅವಕಾಶ ನೀಡಿ ಹೊರಡಿಸಿದ್ದ ಆದೇಶವನ್ನು ಮಾರ್ಪಾಡು ಮಾಡಲು ಸುಪ್ರೀಂ ಕೋರ್ಟ್‌ ಮಂಗಳವಾರ ನಿರಾಕರಿಸಿತ್ತು. ಜ.25ರಂದು ಮಹಾರಾಷ್ಟ್ರದ 475ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್‌ ಚಿತ್ರಮಂದಿರಗಳಿಗೆ ಸೂಕ್ತ ಭದ್ರತೆ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.

2ಡಿ, 3ಡಿ ಹಾಗೂ ಐಮ್ಯಾಕ್ಸ್‌ 3ಡಿ ಸ್ವರೂಪದಲ್ಲಿ ಒಟ್ಟು 3000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪದ್ಮಾವತ್‌ ಬಿಡುಗಡೆ ನಿಗದಿಯಾಗಿದೆ. ಬುಧವಾರ ಸಂಜೆ ದೇಶದ ಹಲವು ಚಿತ್ರಮಂದಿರಗಳಲ್ಲಿ ಚಿತ್ರದ ಪ್ರೀಮಿಯರ್‌ ಶೋ ನಡೆಯುತ್ತಿದ್ದು, ಈಗಾಗಲೇ ಬುಕ್ಕಿಂಗ್‌ ಬಹುತೇಕ ಭರ್ತಿಯಾಗಿದೆ.

ಚಿತ್ರ ಬಿಡುಗಡೆ ವಿರೋಧಿಸಿ ಪ್ರತಿಭಟನೆ:
* ರಜಪೂತ ಸಮುದಾಯದ 1900 ಮಹಿಳೆಯರು ಆತ್ಮಾರ್ಪಣೆಗೆ ಸಿದ್ಧರಾಗಿದ್ದಾರೆ ಎಂದು ಚಿತ್ತೋರ್‌ಗಢದಲ್ಲಿ ಘೋಷಣೆ. ಈ ಹಿನ್ನೆಲೆಯಲ್ಲಿ ಅಲ್ಲಿನ ರಜಪೂತ ಕರ್ಣಿ ಸೇನಾ ಘಟಕದ ಮುಖ್ಯಸ್ಥರ ಬಂಧನ
* ಹರಿಯಾಣದ ಗುರುಗ್ರಾಮದಲ್ಲಿ ಬಸ್‌ಗೆ ಬೆಂಕಿ ಹಾಗೂ ಕಲ್ಲು ತೂರಾಟ
* ರಾಜಸ್ಥಾನದ ಚಿತ್ರ ಪ್ರದರ್ಶನದಿಂದ ಚಿತ್ರ ವಿತರಕರು ಹಿಂದೆ ಸರಿದಿದ್ದಾರೆ
* ಮೀರತ್‌ನ ಪಿವಿಎಸ್‌ ಮಾಲ್‌ ಮೇಲೆ ಕಲ್ಲು ತೂರಿದ ಮುಸುಕುಧಾರಿಗಳ ಗುಂಪು
* ಲಖನೌ ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳಲ್ಲಿ ಬುಧವಾರದ ಪ್ರೀಮಿಯರ್‌ ಶೋ ರದ್ದು
* ಅಹಮದಾಬಾದ್‌ನಲ್ಲಿ 48 ಮಂದಿ ಪ್ರತಿಭಟನಾಕಾರರ ಬಂಧನ
* ಮುಂಬೈನಲ್ಲಿ ಪ್ರತಿಭಟನಾ ನಿರತ ಕರ್ಣಿ ಸೇನಾದ 35ಕ್ಕೂ ಹೆಚ್ಚು ಬೆಂಬಲಿಗರ ಬಂಧನ
* ದೆಹಲಿ–ಜೈಪುರ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry