ಮುಂಬೈ ರ‌್ಯಾಲಿಯಲ್ಲಿ ಒವೈಸಿ ಮೇಲೆ ಶೂ ಎಸೆತ

7

ಮುಂಬೈ ರ‌್ಯಾಲಿಯಲ್ಲಿ ಒವೈಸಿ ಮೇಲೆ ಶೂ ಎಸೆತ

Published:
Updated:
ಮುಂಬೈ ರ‌್ಯಾಲಿಯಲ್ಲಿ ಒವೈಸಿ ಮೇಲೆ ಶೂ ಎಸೆತ

ಮುಂಬೈ: ದಕ್ಷಿಣ ಮುಂಬೈಯ ನಾಗ್ಪದ ಎಂಬಲ್ಲಿ ರ‌್ಯಾಲಿಯನ್ನುದ್ದೇಶಿ ಮಾತನಾಡುತ್ತಿದ್ದ ವೇಳೆ ಎಐಎಂಐಎಂ ಮುಖ್ಯಸ್ಥ ಅಸಾವುದ್ದೀನ್ ಒವೈಸಿ ಮೇಲೆ ವ್ಯಕ್ತಿಯೊಬ್ಬ ಶೂ ಎಸೆದ ಘಟನೆ ನಡೆದಿದೆ.

ಈ ಘಟನೆಯಲ್ಲಿ ಒವೈಸಿಯವರಿಗೆ ಗಾಯಗಳೇನೂ ಆಗಿಲ್ಲ.

ರ‌್ಯಾಲಿಯಲ್ಲಿ ತ್ರಿವಳಿ ತಲಾಖ್ ಬಗ್ಗೆ ಒವೈಸಿ ಮಾತನಾಡುತ್ತಿದ್ದ ವೇಳೆ ಶೂ ಎಸೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಹೇಳಿದ್ದಾರೆ.

ನಾನು ಪ್ರಜಾಪ್ರಭುತ್ವದ ಹಕ್ಕುಗಳಿಗಾಗಿ ನನ್ನ ಜೀವನವನ್ನೇ ಮುಡಿಪಾಗಿಡಲು ತಯಾರಿದ್ದೇನೆ. ತ್ರಿವಳಿ ತಲಾಖ್ ಬಗ್ಗೆ ಸರ್ಕಾರದ ನಿರ್ಧಾರವನ್ನು ಹೆಚ್ಚಿನ ಜನರು ಮತ್ತು ಕೆಲವು ಮುಸ್ಲಿಮರು ಒಪ್ಪಿಲ್ಲ ಎಂಬುದು ಹತಾಶರಾದ ಈ ಜನರಿಗೆ ಕಾಣುವುದಿಲ್ಲ ಎಂದು ಒವೈಸಿ ಗುಡುಗಿದ್ದಾರೆ.

ತನ್ನ ಮೇಲೆ ಶೂ ಎಸೆದ ವ್ಯಕ್ತಿಯ ಬಗ್ಗೆ ಮಾತನಾಡಿದ ಒವೈಸಿ, ಮಹಾತ್ಮಗಾಂಧಿ , ಗೋವಿಂದ ಪನ್ಸಾರೆ ಮತ್ತು ನರೇಂದ್ರ ದಾಭೋಲ್ಕರ್ ಅವರ ಹಂತಕರ ಮನಸ್ಥಿತಿ ಉಳ್ಳವರು ಈ ರೀತಿ ಮಾಡುತ್ತಾರೆ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry