ತೆಲುಗು, ಕನ್ನಡದ ಹಿರಿಯ ನಟಿ ಕೃಷ್ಣಕುಮಾರಿ ನಿಧನ

7

ತೆಲುಗು, ಕನ್ನಡದ ಹಿರಿಯ ನಟಿ ಕೃಷ್ಣಕುಮಾರಿ ನಿಧನ

Published:
Updated:
ತೆಲುಗು, ಕನ್ನಡದ ಹಿರಿಯ ನಟಿ ಕೃಷ್ಣಕುಮಾರಿ ನಿಧನ

ಬೆಂಗಳೂರು:  ತೆಲುಗು ಹಾಗೂ ಕನ್ನಡದ ಹಿರಿಯ ನಟಿ ಕೃಷ್ಣಕುಮಾರಿ (85) ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ಬುಧವಾರ ಬೆಳಿಗ್ಗೆ ಆರು ಗಂಟೆಯ ಸುಮಾರಿಗೆ ನಿಧನರಾದರು. ಅವರು ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅವರು ಕನ್ನಡ ಚಲನಚಿತ್ರಗಳಲ್ಲಿಯೂ ನಟಿಸಿದ್ದರು.

ಕೃಷ್ಣಕುಮಾರಿ ಅವರಿಗೆ ಪುತ್ರಿ, ಅಳಿಯ ಇದ್ದಾರೆ. ಕೃಷ್ಣಕುಮಾರಿ ಅವರ ಅಂತ್ಯಸಂಸ್ಕಾರವು ಬೆಂಗಳೂರಿನ ವಿಲ್ಸನ್‌ ಗಾರ್ಡನ್‌ನಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ವೈಷ್ಣವ ಸಂಪ್ರದಾಯದ ಅನುಸಾರ ನಡೆಯಿತು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ತೆಲುಗಿನಲ್ಲಿ ಎನ್‌.ಟಿ. ರಾಮರಾವ್‌, ಅಕ್ಕಿನೇನಿ ನಾಗೇಶ್ವರ ರಾವ್, ಕನ್ನಡದಲ್ಲಿ ಡಾ. ರಾಜ್ ಕುಮಾರ್‌ ಜೊತೆ ಅವರು ಅಭಿನಯಿಸಿದ್ದರು. ಹಿರಿಯ ನಟಿ ಸಾಹುಕಾರ್ ಜಾನಕಿ ಅವರು ಕೃಷ್ಣಕುಮಾರಿ ಅವರ ಸಹೋದರಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry