ಬೆಂಗಳೂರಿನಲ್ಲಿ ಬುಧವಾರವೇ ತೆರೆಗೆ ಬಂದ ‘ಪದ್ಮಾವತ್’

7

ಬೆಂಗಳೂರಿನಲ್ಲಿ ಬುಧವಾರವೇ ತೆರೆಗೆ ಬಂದ ‘ಪದ್ಮಾವತ್’

Published:
Updated:
ಬೆಂಗಳೂರಿನಲ್ಲಿ ಬುಧವಾರವೇ ತೆರೆಗೆ ಬಂದ ‘ಪದ್ಮಾವತ್’

ಬೆಂಗಳೂರು: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಚಿತ್ರ ‘ಪದ್ಮಾವತ್’ ಬೆಂಗಳೂರಿನಲ್ಲಿ ಬುಧವಾರವೇ ತೆರೆಗೆ ಬಂದಿದೆ. ಆದರೆ ಈ ಚಿತ್ರ ಜನವರಿ 25ರಂದು (ಗುರುವಾರ) ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಈ ಮೊದಲು ಹೇಳಿತ್ತು.

ನಗರದ ಬಹುತೇಕ ಮಲ್ಟಿಪ್ಲೆಕ್ಸ್‌ಗಳಲ್ಲಿ ‘ಪದ್ಮಾವತ್’ ಚಿತ್ರದ ಪ್ರದರ್ಶನ ನಿಗದಿಯಾಗಿದೆ. ಬುಧವಾರ ಸಂಜೆ ಆರು ಗಂಟೆಯ ನಂತರ ಪ್ರದರ್ಶನ ಆರಂಭವಾಗಿದೆ. ಟಿಕೆಟ್ ದರ ಕೆಲವು ಕಡೆ ₹ 1,000 ನಿಗದಿ ಮಾಡಲಾಗಿದೆ.

‘ಈ ಸಿನಿಮಾ ಬಗ್ಗೆ ಜನರಲ್ಲಿ ಇರುವ ಕುತೂಹಲದ ಪ್ರಯೋಜನ ಪಡೆದುಕೊಳ್ಳುವ ಉದ್ದೇಶದಿಂದ ಹೀಗೆ ಮಾಡಲಾಗುತ್ತಿದೆ. ಗುರುವಾರದ ಬಂದ್‌ಗೂ ಇದಕ್ಕೂ ಸಂಬಂಧವಿಲ್ಲ’ ಎಂದು ಪ್ರದರ್ಶಕ ಕೆ.ಸಿ. ಮೋಹನ್ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry