ಹಾಕಿ ಕೋಚ್‌ ಪಾತ್ರಕ್ಕೆ ಅಜಯ್

7

ಹಾಕಿ ಕೋಚ್‌ ಪಾತ್ರಕ್ಕೆ ಅಜಯ್

Published:
Updated:
ಹಾಕಿ ಕೋಚ್‌ ಪಾತ್ರಕ್ಕೆ ಅಜಯ್

ವಿಭಿನ್ನ ಪಾತ್ರಗಳಿಂದ ಅಭಿಮಾನಿಗಳ ಮನಗೆದ್ದಿರುವ ನಟ ಅಜಯ್‌ ದೇವಗನ್‌ ಹಾಕಿ ತರಬೇತುದಾರರಾಗಿ ಆಯ್ಕೆಯಾಗಿದ್ದಾರೆ.

‘ಮಾಮ್‌’ ಚಿತ್ರದಿಂದ ಹೆಸರಾಗಿರುವ ರವಿ ಉದ್ಯಾವರ್‌ ಅವರು ತಮ್ಮ ನಿರ್ದೇಶನದ ಹೊಸ ಚಿತ್ರಕ್ಕಾಗಿ ಅಜಯ್‌ ಅವರೊಂದಿಗೆ ಈಗಾಗಲೇ ಚರ್ಚೆ ನಡೆಸಿದ್ದಾರೆ. ಪಾತ್ರದ ಬಗ್ಗೆ ಅಜಯ್‌ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೋನಿ ಕಪೂರ್‌ ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ಚಿತ್ರಕತೆಯನ್ನು ಮೆಚ್ಚಿಕೊಂಡಿದ್ದರೂ ಅಜಯ್‌ ತಮ್ಮ ಅನುಮತಿಯನ್ನು ಇನ್ನಷ್ಟೇ ತಿಳಿಸಬೇಕಿದೆ. ಅವರು ಒಪ್ಪಿಕೊಂಡರೆ ಕ್ರೀಡೆಗೆ ಸಂಬಂಧಿಸಿದ ಚಿತ್ರದಲ್ಲಿಯೂ ನಟಿಸಿದ ಹೆಗ್ಗಳಿಕೆ ಅವರದಾಗುತ್ತದೆ. ರಾಜ್‌ಕುಮಾರ್‌ ಗುಪ್ತಾ ಅವರ ‘ರೈಡ್‌’, ಇಂದ್ರಕುಮಾರ್‌ ನಿರ್ದೇಶನದ ‘ಟೋಟಲ್‌ ಧಮಾಲ್‌’ ಮತ್ತು ಇನ್ನೂ ಹೆಸರಿಡದ ಚಿತ್ರವೊಂದರಲ್ಲಿ ಅಜಯ್‌ ಈಗ ನಟಿಸುತ್ತಿದ್ದಾರೆ.

‘ಚಕ್‌ ದೇ ಇಂಡಿಯಾ’ದಲ್ಲಿ ಹಾಕಿ ತರಬೇತುದಾರನಾಗಿ ಕಾಣಿಸಿಕೊಂಡ ಶಾರುಕ್‌ ಖಾನ್‌, ಆ ಪಾತ್ರವನ್ನು ತಮ್ಮ ಚಿತ್ರ ಬದುಕಿನ ವಿಶೇಷ ಸಂದರ್ಭ ಎಂದು ಬಣ್ಣಿಸಿದ್ದರು. ಇದೀಗ ಅಜಯ್‌ ದೇವಗನ್‌ ನಿರ್ವಹಿಸಲಿರುವ ಅದೇ ಬಗೆಯ ಪಾತ್ರ ಅವರಿಗೆ ಯಾವ ಖದರು ನೀಡಲಿದೆ ಎಂಬುದನ್ನು ಕಾದುನೋಡಬೇಕಿದೆ.

ಚಿತ್ರದ ತಾರಾಗಣದ ಆಯ್ಕೆ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಅಜಯ್‌ ಪತ್ನಿ ಕಾಜೊಲ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂಬುದು ಬಿ ಟೌನ್‌ನಲ್ಲಿ ಚರ್ಚೆ ಆರಂಭವಾಗಿದೆ. ಆದರೆ ಈ ಬಗ್ಗೆ ಬೋನಿ ಕಪೂರ್‌ ಆಗಲಿ, ನಿರ್ದೇಶಕ ರವಿ ಉದ್ಯಾವರ್‌ ಆಗಲಿ ಪ್ರತಿಕ್ರಿಯಿಸಿಲ್ಲ.

ರವಿ ಉದ್ಯಾವರ್‌ ಲೆಕ್ಕಾಚಾರ ಸರಿಯಾದರೆ ಅಜಯ್‌ ದೇವಗನ್‌ ಅವರ ಚಿತ್ರರಂಗದ ಬದುಕಿನಲ್ಲಿ ಈ ಚಿತ್ರಮೈಲಿಗಲ್ಲು ಆಗುವ ಸಾಧ್ಯತೆ ಇದೆ ಎಂದೂ ಬಾಲಿವುಡ್‌ ಲೆಕ್ಕಾಚಾರ ಹಾಕುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry