ಪದ್ಮಾವತ್ ವಿರುದ್ಧ ಪ್ರತಿಭಟನೆ: ಗುರುಗ್ರಾಮದಲ್ಲಿ ಶಾಲಾ ಬಸ್‍ ಮೇಲೆ ಕಲ್ಲು ತೂರಾಟ

7

ಪದ್ಮಾವತ್ ವಿರುದ್ಧ ಪ್ರತಿಭಟನೆ: ಗುರುಗ್ರಾಮದಲ್ಲಿ ಶಾಲಾ ಬಸ್‍ ಮೇಲೆ ಕಲ್ಲು ತೂರಾಟ

Published:
Updated:
ಪದ್ಮಾವತ್ ವಿರುದ್ಧ ಪ್ರತಿಭಟನೆ: ಗುರುಗ್ರಾಮದಲ್ಲಿ ಶಾಲಾ ಬಸ್‍ ಮೇಲೆ ಕಲ್ಲು ತೂರಾಟ

ದೆಹಲಿ: ಪದ್ಮಾವತ್ ಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತ ಪಡಿಸಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಗುರುಗ್ರಾಮದಲ್ಲಿ ಶಾಲಾ ಬಸ್‍ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ.

ಇಲ್ಲಿನ ಗೊಯೆಂಕಾ ವರ್ಲ್ಡ್ ಸ್ಕೂಲ್ ಬಸ್ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿ ಬಸ್ಸಿನ ಕಿಟಕಿ ಗಾಜುಗಳನ್ನು ಒಡೆದಿದ್ದಾರೆ.

ಎರಡನೇ ತರಗತಿಯಿಂದ 12ನೇ ತರಗತಿಯವರೆಗಿ ಮಕ್ಕಳು, ಶಿಕ್ಷಕರು ಈ ಬಸ್ಸಿನಲ್ಲಿದ್ದರು. ಬಸ್ಸಿನ ಮೇಲೆ ದಾಳಿ ನಡೆಯುವಾಗ ಭಯದಿಂದ ಮಕ್ಕಳು ಅಳುತ್ತಿರುವ ದೃಶ್ಯ ಮೊಬೈಲ್‍ನಲ್ಲಿ ಸೆರೆಯಾಗಿದೆ.

ಕಲ್ಲೇಟನ್ನು ತಪ್ಪಿಸಲು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೀಟಿನ ಅಡಿಯಲ್ಲಿ ರಕ್ಷಣೆ ಪಡೆದಿದ್ದಾರೆ. ದುಷ್ಕರ್ಮಿಗಳು ಈ ರೀತಿ ದಾಂಧಲೆ ನಡೆಸುವಾಗ ಪೊಲೀಸರು ಸಹಾಯಕ್ಕೆ ಬರಲಿಲ್ಲ ಎಂದು ಶಾಲಾ ಅಧಿಕೃತರು ದೂರು ನೀಡಿದ್ದಾರೆ.

ಅದೇ ವೇಳೆ ಬುಧವಾರ ಮಧ್ಯಾಹ್ನ ರಾಜ್ಯ ಸಾರಿಗೆ ಸಂಸ್ಥೆ ಬಸ್‍ಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry