ರೈಲು ಸಂಪರ್ಕ ಹೆಚ್ಚಿಸಿ

7

ರೈಲು ಸಂಪರ್ಕ ಹೆಚ್ಚಿಸಿ

Published:
Updated:

ರಸ್ತೆ ದುರಸ್ತಿಗಾಗಿ ಶಿರಾಡಿ ಹೆದ್ದಾರಿಯನ್ನು ಕೆಲವು ತಿಂಗಳುಗಳ ಕಾಲ ಮುಚ್ಚಿರುವುದು ವಿವೇಚನಾರಹಿತ ಕ್ರಮ. ಏಕಾಏಕಿ ಈ ರಸ್ತೆಯನ್ನು ಮುಚ್ಚಿದ್ದರಿಂದ ಕುಕ್ಕೆ ಸುಬ್ರಹ್ಮಣ್ಯ, ಸೌತಡ್ಕ, ಧರ್ಮಸ್ಥಳ, ಕಟೀಲು, ಉಡುಪಿ, ಹೊರನಾಡು, ಶೃಂಗೇರಿ ಮುಂತಾದ ಯಾತ್ರಾ ಸ್ಥಳಗಳಿಗೆ ತಲುಪಲು ಬಹಳ ಕಷ್ಟಪಡಬೇಕಾಗುತ್ತದೆ. ಫೆಬ್ರುವರಿ ತಿಂಗಳಲ್ಲಿ ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕ ನಡೆಯಲಿದೆ. ರಸ್ತೆ ಬಂದ್‌ ಮಾಡಿದ್ದರಿಂದ ಕರಾವಳಿ ಭಾಗದ ಜನರಿಗೆ ಶ್ರವಣಬೆಳಗೊಳಕ್ಕೆ ಬರಲು ಕಷ್ಟವಾಗುತ್ತದೆ. ಜನರಿಗಾಗುವ ಕಿರಿಕಿರಿ ತಪ್ಪಿಸಲು ಬೆಂಗಳೂರು– ಮಂಗಳೂರು ಮಾರ್ಗದಲ್ಲಿ ಹೆಚ್ಚುವರಿ ರೈಲು ಸೇವೆಯನ್ನು ತುರ್ತಾಗಿ ಆರಂಭಿಸಬೇಕು.

– ಆರ್‌. ಶಂಕರ್‌ಮಣಿ, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry