ಬೆಂಗಳೂರು, ಚಿಕ್ಕಮಗಳೂರು ಖಾಸಗಿ ಶಾಲೆಗಳಿಗೆ ರಜೆ: ಬೀದರ್‌, ಚಿತ್ರದುರ್ಗದಲ್ಲಿ ಬಂದ್‌ ಇಲ್ಲ

7

ಬೆಂಗಳೂರು, ಚಿಕ್ಕಮಗಳೂರು ಖಾಸಗಿ ಶಾಲೆಗಳಿಗೆ ರಜೆ: ಬೀದರ್‌, ಚಿತ್ರದುರ್ಗದಲ್ಲಿ ಬಂದ್‌ ಇಲ್ಲ

Published:
Updated:
ಬೆಂಗಳೂರು, ಚಿಕ್ಕಮಗಳೂರು ಖಾಸಗಿ ಶಾಲೆಗಳಿಗೆ ರಜೆ: ಬೀದರ್‌, ಚಿತ್ರದುರ್ಗದಲ್ಲಿ ಬಂದ್‌ ಇಲ್ಲ

ಬೆಂಗಳೂರು: ಕನ್ನಡ ಸಂಘಟನೆಗಳು 25ರಂದು(ಗುರುವಾರ) ‘ಕರ್ನಾಟಕ ಬಂದ್‌’ಗೆ ಕರೆ ನೀಡಿರುವ ಕಾರಣ ಶಾಲೆಗಳಿಗೆ ರಜೆ ನೀಡಲು ಕೆಲವು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ನಿರ್ಧರಿಸಿವೆ.

ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ರಜೆ ನೀಡಲು ನಿರ್ಧರಿಸಿರುವುದಾಗಿ ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ಕೆಎಎಂಎಸ್‌) ತಿಳಿಸಿದೆ.

ಚಿಕ್ಕಮಗಳೂರು: ಕನ್ನಡ ಸಂಘಟನೆಗಳು ಗುರುವಾರ ಬಂದ್ ಕರೆ ನೀಡಿದ್ದು, ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಆದೇಶ ಹೊರಡಿಸಿದ್ದಾರೆ.

ಬೀದರ್: ಜಿಲ್ಲೆಯಲ್ಲಿ ಯಾವುದೇ ಬಂದ್ ಇಲ್ಲ, ರಜೆಯೂ ಇಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೇವರಾಜ್ ತಿಳಿಸಿದ್ದಾರೆ.

ಚಿತ್ರದುರ್ಗ: ಅಧಿಕೃತವಾಗಿ ಯಾವುದೇ ಸಂಘಟನೆಗಳು ಬಂದ್‌ಗೆ ಕರೆ ನೀಡಿಲ್ಲ ಹಾಗಾಗಿ ಶಾಲಾ– ಕಾಲೇಜು, ಸರ್ಕಾರಿ ಕಚೇರಿಗಳಿಗೆ ರಜೆ‌ ಇಲ್ಲ ಎಂದು ಜಿಲ್ಲಾಧಿಕಾರಿ‌ ಜ್ಯೋತ್ಸ್ನಾ ತಿಳಿಸಿದ್ದಾರೆ.

‘ಕೆಲವು ಸಂಘಟನೆಗಳು ಸಾಂಕೇತಿಕ ಪ್ರತಿಭಟನೆ ನಡೆಸಲು ಮನವಿ ‌ಸಲ್ಲಿಸಿವೆ. ಅಹಿತಕರ ಘಟನೆಗಳು ನಡೆಯದಂತೆ ನಗರದಾದ್ಯಂತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ’ ಎಂದು ಎಸ್‌ಪಿ ಶ್ರೀನಾಥ್ ಜೋಶಿ‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry