ಬನ್ನಿಕೋಡು: ಸವರ್ಣಿಯ–ದಲಿತರ ನಡುವೆ ವಾಗ್ವಾದ

7

ಬನ್ನಿಕೋಡು: ಸವರ್ಣಿಯ–ದಲಿತರ ನಡುವೆ ವಾಗ್ವಾದ

Published:
Updated:

ಹರಿಹರ: ತಾಲ್ಲೂಕಿನ ಬನ್ನಿಕೋಡು ಗ್ರಾಮದಲ್ಲಿ ದಲಿತರಿಗೆ ಕ್ಷೌರ ಮಾಡಲು ನಿರಾಕರಿಸಿದ ಕಾರಣ ಬುಧವಾರ ದಲಿತ ಮತ್ತು ಸವರ್ಣಿಯರ ಮಧ್ಯೆ ವಾಗ್ವಾದ ನಡೆಯಿತು.

ಬನ್ನಿಕೋಡು ಗ್ರಾಮದಲ್ಲಿ ಪಂಪಣ್ಣ ಎಂಬುವವರ ಕ್ಷೌರದ ಅಂಗಡಿಯಲ್ಲಿ ದಲಿತರಿಗೆ ಸೇವೆ ಒದಗಿಸುತ್ತಿಲ್ಲ ಎಂದು ದಲಿತ ಮುಖಂಡ ವಾಗೀಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಅಂಗಡಿ ಮಾಲೀಕ ಹಾಗೂ ದಲಿತರ ನಡುವೆ ವಾಗ್ವಾದ ನಡೆದು, ಕೆಲಕಾಲ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು.

ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ರೆಹಾನ್‌ ಪಾಷಾ ಹಾಗೂ ಸಿಪಿಐ ಲಕ್ಷ್ಮಣ ನಾಯ್ಕ ಗ್ರಾಮದಲ್ಲಿ ಶಾಂತಿ ಸಭೆ ನಡೆಸಿ, ವಾತಾವರಣ ತಿಳಿಗೊಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry