ಕೆನರಾ ಬ್ಯಾಂಕ್‌: ₹126 ಕೋಟಿ ನಿವ್ವಳ ಲಾಭ

7

ಕೆನರಾ ಬ್ಯಾಂಕ್‌: ₹126 ಕೋಟಿ ನಿವ್ವಳ ಲಾಭ

Published:
Updated:
ಕೆನರಾ ಬ್ಯಾಂಕ್‌: ₹126 ಕೋಟಿ ನಿವ್ವಳ ಲಾಭ

ಬೆಂಗಳೂರು: ಕೆನರಾ ಬ್ಯಾಂಕ್‌, ಮೂರನೇ ತ್ರೈಮಾಸಿಕ ಅವಧಿಯಲ್ಲಿ ₹ 126 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಬ್ಯಾಂಕ್‌ ₹ 322 ಕೋಟಿ ನಿವ್ವಳ ಲಾಭ ಗಳಿಸಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ನಿವ್ವಳ ಲಾಭ ಶೇ 60.87ರಷ್ಟು ಕುಸಿತ ದಾಖಲಿಸಿದೆ. ಆದರೆ, ಒಟ್ಟು ಲಾಭ ಶೇ 42.9ರಷ್ಟು ಏರಿಕೆಯೊಂದಿಗೆ ₹2,831 ಕೋಟಿಗೆ ತಲುಪಿದೆ. ಕಳೆದ ವರ್ಷ ಇದು ₹1,981ರಷ್ಟಿತ್ತು.

‘ಹಿಂದಿನ ತ್ರೈಮಾಸಿಕದಲ್ಲಿ ಶೇ 7.02ರಷ್ಟಿದ್ದ ನಿವ್ವಳ ವಸೂಲಾಗದ ಸಾಲದ ಪ್ರಮಾಣದ (ಎನ್‌ಪಿಎ) ಅನುಪಾತ ಶೇ 6.78ಕ್ಕೆ ಇಳಿಯುವ ಮೂಲಕ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸಿದೆ. ಪ್ರಸಕ್ತ ಆರ್ಥಿಕ ವರ್ಷದ ಕೊನೆಗೆ ಈ ಅನುಪಾತ ಶೇ 5.5ಕ್ಕಿಂತ ಕಡಿಮೆಯಾಗುವ ನಿರೀಕ್ಷೆ ಇದೆ’ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ರಾಕೇಶ್‌ ಶರ್ಮಾ ಅವರು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ದೇಶದ ಆರ್ಥಿಕ ವ್ಯವಸ್ಥೆ ಚೇತರಿಸಿಕೊಂಡರೆ ಎನ್‌ಪಿಎ ಸ್ಥಿತಿ ಸುಧಾರಿಸಲಿದೆ’ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಠೇವಣಿ ಸಂಗ್ರಹದಲ್ಲಿ ಹೆಚ್ಚಳ: ‘ಕಳೆದ ವರ್ಷಕ್ಕೆ ಹೋಲಿಸಿದರೆ ಬ್ಯಾಂಕ್‌ ಈ ಅವಧಿಯಲ್ಲಿ ಶೇ 24.7ರಷ್ಟು ಅಂದರೆ, ₹5,245 ನಿವ್ವಳ ಆದಾಯ ಗಳಿಸಿದೆ. ಠೇವಣಿ ಸಂಗ್ರಹವು ಶೇ 2.53ರಷ್ಟು ಹೆಚ್ಚಿದ್ದು, ₹1.58 ಲಕ್ಷ ಕೋಟಿಗಳಿಗೆ ತಲುಪಿದೆ’ ಎಂದು ತಿಳಿಸಿದರು.

‘ನಿವ್ವಳ ಬಡ್ಡಿ ಆದಾಯದಲ್ಲಿ ಶೇ 52.4ರಷ್ಟು ಮತ್ತು ಬಡ್ಡಿಯೇತರ ಆದಾಯದಲ್ಲಿ ಶೇ 11.29ರಷ್ಟು ಬೆಳವಣಿಗೆ ಸಾಧಿಸಲಾಗಿದೆ’ ಎಂದು ಕಾರ್ಯನಿರ್ವಾಹಕ  ನಿರ್ದೇಶಕ ಎಂ.ವಿ. ರಾವ್‌ ತಿಳಿಸಿದರು.

‘ಮುಂಗಡ ಠೇವಣಿ ಅನುಪಾತ ಶೇ 74.05ಕ್ಕೆ ತಲುಪಿದ್ದು, ಜಾಗತಿಕ ವ್ಯವಹಾರ ಶೇ 4.16ರಷ್ಟು ಏರಿಕೆ ಕಾಣುವುದರೊಂದಿಗೆ ₹8.77 ಲಕ್ಷ ಕೋಟಿಗೆ ತಲುಪಿದೆ’ ಎಂದು  ಕಾರ್ಯನಿರ್ವಾಹಕ ನಿರ್ದೇಶಕಿ ಪಿ.ವಿ. ಭಾರತಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry