ಷೇರುಪೇಟೆಯ ಕನಸಿನ ಓಟ ಅಬಾಧಿತ

7

ಷೇರುಪೇಟೆಯ ಕನಸಿನ ಓಟ ಅಬಾಧಿತ

Published:
Updated:
ಷೇರುಪೇಟೆಯ ಕನಸಿನ ಓಟ ಅಬಾಧಿತ

ಮುಂಬೈ: ಮುಂಬೈ ಷೇರುಪೇಟೆ (ಬಿಎಸ್‌ಇ) ಮತ್ತು ರಾಷ್ಟ್ರೀಯ ಷೇರುಪೇಟೆ (ನಿಫ್ಟಿ) ಸೂಚ್ಯಂಕಗಳು ಬುಧವಾರದ ವಹಿವಾಟಿನಲ್ಲಿ ಅಲ್ಪಮಟ್ಟಿಗಿನ ಏರಿಕೆ ಕಂಡವು.

ಸತತ ಆರನೇ ವಹಿವಾಟಿನ ದಿನವೂ ಸೂಚ್ಯಂಕಗಳು ಹೊಸ ಜಿಗಿತ ಕಂಡವು. ಬ್ಯಾಂಕಿಂಗ್‌ ಮತ್ತು ಐ.ಟಿ ಷೇರುಗಳ ಖರೀದಿಯಲ್ಲಿ ಹೆಚ್ಚಿನ ಒಲವು ಕಂಡುಬಂದಿತು.

ಪೇಟೆಯಲ್ಲಿ ಹೂಡಿಕೆದಾರರ ಖರೀದಿ ಉತ್ಸಾಹ ಸದ್ಯಕ್ಕೆ ಉಡುಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಹೀಗಾಗಿ ಸೂಚ್ಯಂಕಗಳು ದಾಖಲೆ ಮೇಲೆ ದಾಖಲೆ ಬರೆಯುತ್ತಿವೆ.

ಹೂಡಿಕೆದಾರರು ಖರೀದಿ ವಹಿವಾಟಿನಿಂದ ದೂರ ಸರಿಯದ ಕಾರಣಕ್ಕೆ ಷೇಟೆಯಲ್ಲಿ ಷೇರುಗಳ ಬೆಲೆಗಳು ನಿರಂತರವಾಗಿ ಏರುಗತಿಯಲ್ಲಿ ಇವೆ. ದೂರಸಂಪರ್ಕ ಸೇವಾ ವಲಯದ ಷೇರುಗಳ ಬೆಲೆಗಳು ಶೇ 6.5ರಷ್ಟು ಕುಸಿತ ಕಂಡಿರುವುದು ಇಂದಿನ ವಿಶೇಷತೆಯಾಗಿತ್ತು. ಕೆಲ ಯೋಜನೆಗಳಡಿ ಹೆಚ್ಚುವರಿ ಡೇಟಾ ಒದಗಿಸುವುದಾಗಿ ರಿಲಯನ್ಸ್‌ ಜಿಯೊ ನಿರ್ಧರಿಸಿರುವುದರಿಂದ ಮೊಬೈಲ್ ಸೇವಾ ರಂಗದಲ್ಲಿ ದರ ಸಮರ ಇನ್ನಷ್ಟು ತೀವ್ರಗೊಳ್ಳಲಿದೆ. ನಾಳೆ ತಿಂಗಳ ವಾಯಿದಾ ವಹಿವಾಟು ನಡೆಯಲಿರುವುದರಿಂದ ವಹಿವಾಟುದಾರರು ತಮ್ಮ ಖರೀದಿ ಉತ್ಸಾಹಕ್ಕೆ ಕೆಲಮಟ್ಟಿಗೆ ಕಡಿವಾಣ ಹಾಕಿಕೊಂಡಿದ್ದಾರೆ.

ಸಂವೇದಿ ಸೂಚ್ಯಂಕವು ದಿನದ ವಹಿವಾಟಿನ ಒಂದು ಹಂತದಲ್ಲಿ 36,268 ಅಂಶಗಳಿಗೆ ತಲುಪಿತ್ತು. ಆದರೆ, ದಾಖಲೆ ಮಟ್ಟದಲ್ಲಿ ಲಾಭ ಮಾಡಿಕೊಳ್ಳುವ ಪ್ರವೃತ್ತಿಯಿಂದಾಗಿ 36,036 ಅಂಶಗಳಿಗೆ ಕುಸಿದಿತ್ತು. ಅಂತಿಮವಾಗಿ 21.66 ಅಂಶಗಳ ಏರಿಕೆಯೊಂದಿಗೆ (36,161 ಅಂಶ) ವಹಿವಾಟು ಕೊನೆಗೊಳಿಸಿತು.

‘ನಿಫ್ಟಿ’ಯಲ್ಲಿ ಕೇವಲ 2.30 ಅಂಶ ಏರಿಕೆ ಕಂಡು ಬಂದಿತು. 11,086 ಅಂಶಗಳೊಂದಿಗೆ ವಹಿವಾಟು ಅಂತ್ಯಕಂಡಿತು.

ವಿದೇಶಿ ಹೂಡಿಕೆದಾರರು ತಮ್ಮ ಖರೀದಿ ಭರಾಟೆ ಮುಂದುವರೆಸಿದ್ದಾರೆ. ಮಂಗಳವಾರದ ವಹಿವಾಟಿನಲ್ಲಿ ₹ 1,229 ಕೋಟಿ ಮೊತ್ತದ ಷೇರು ಖರೀದಿಸಿದ್ದಾರೆ. ದೇಶಿ ಸಾಂಸ್ಥಿಕ ಹೂಡಿಕೆದಾರರು ₹169 ಕೋಟಿಗಳ ಷೇರು ಖರೀಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry