ಬಿಗ್‌ ಬಜಾರ್‌ನ ಸಬ್ಸೆ ಸಸ್ತೆ ದಿನ್‌

7

ಬಿಗ್‌ ಬಜಾರ್‌ನ ಸಬ್ಸೆ ಸಸ್ತೆ ದಿನ್‌

Published:
Updated:

ಬೆಂಗಳೂರು: ದೇಶದ ಪ್ರಮುಖ ಸರ್ವ ಸರಕು ಮಾರಾಟದ ಸರಣಿ ಸಂಸ್ಥೆಯಾಗಿರುವ ಬಿಗ್‌ ಬಜಾರ್‌ನ ಮಳಿಗೆಗಳಲ್ಲಿ, ಇದೇ 28ರವರೆಗೆ ದೇಶದಾದ್ಯಂತ ‘ಸಬ್ಸೆ ಸಸ್ತೆ 5 ದಿನ್‌’ ಹೆಸರಿನ ಖರೀದಿ ಉತ್ಸವ ನಡೆಯಲಿದೆ.

ಇದು ದೇಶದ ಅತಿದೊಡ್ಡ ಮತ್ತು ಅತ್ಯಂತ ಜನಪ್ರಿಯ ಖರೀದಿ ಉತ್ಸವವಾಗಿದೆ. ಈ ಉತ್ಸವದ 12ನೇ ವರ್ಷಾಚರಣೆ ಇದಾಗಿದೆ. ಹೀಗಾಗಿ ಈ ಬಾರಿ ಗ್ರಾಹಕರಿಗೆ ಗೃಹೋಪಯೋಗಿ ಸಲಕರಣೆ, ಪಾದರಕ್ಷೆ, ಆಟಿಕೆ, ಅಡುಗೆಮನೆ ಸಲಕರಣೆ, ವಸ್ತ್ರ, ಗೃಹ ಅಲಂಕಾರ ಮತ್ತಿತರ ಸರಕುಗಳ ಬೆಲೆಗಳ ಮೇಲೆ ಭಾರಿ ರಿಯಾಯ್ತಿ ಘೋಷಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಗ್ರಾಹಕರು ಖರೀದಿಸುವ ಸರಕುಗಳನ್ನು ಮನೆಗಳಿಗೆ ತಲುಪಿಸುವ ಸೌಲಭ್ಯವನ್ನೂ ಕಲ್ಪಿಸಲಾಗಿದೆ.

₹ 5 ಸಾವಿರ ಮೊತ್ತದವರೆಗೆ ಸರಕು ಖರೀದಿಸುವ ಗ್ರಾಹಕರಿಗೆ ₹ 1 ಸಾವಿರ ಮತ್ತು ₹ 2,500ರಷ್ಟು ಖರೀದಿಸಿದವರಿಗೆ ₹ 500 ನಗದನ್ನು ಅವರ ಫ್ಯೂಚರ್‌ ಪೇ ಇ–ವಾಲೆಟ್‌ಗೆ ಮರಳಿಸಲಾಗುವುದು.

‘ಪ್ರತಿ ವರ್ಷದಂತೆ ಈ ವರ್ಷವೂ ಸಂಸ್ಥೆಯು ತನ್ನ ಗ್ರಾಹಕರಿಗೆ ಅನೇಕ ಅಚ್ಚರಿಗಳ ಕೊಡುಗೆ ನೀಡುತ್ತಿದೆ’ ಎಂದು ಸಂಸ್ಥೆಯ ಸಿಇಒ ಸದಾಶಿವ ನಾಯಕ್‌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry