ಮುಂಬೈ: ಒವೈಸಿ ಮೇಲೆ ಶೂ ಎಸೆತ

7

ಮುಂಬೈ: ಒವೈಸಿ ಮೇಲೆ ಶೂ ಎಸೆತ

Published:
Updated:
ಮುಂಬೈ: ಒವೈಸಿ ಮೇಲೆ ಶೂ ಎಸೆತ

ಮುಂಬೈ: ರ‍್ಯಾಲಿಯನ್ನು ಉದ್ದೇಶಿಸಿ ಮಂಗಳವಾರ ಇಲ್ಲಿ ಮಾತನಾಡುತ್ತಿದ್ದ ವೇಳೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ಮೇಲೆ ಶೂ ಎಸೆಯಲಾಗಿದೆ.

‘ದಕ್ಷಿಣ ಮುಂಬೈನ ನಾಗಪಾಡದಲ್ಲಿ ಆಯೋಜಿಸಿದ್ದ ರ‍್ಯಾಲಿಯೊಂದರಲ್ಲಿ ತ್ರಿವಳಿ ತಲಾಕ್‌ ವಿಷಯದ ಕುರಿತು ಅವರು ಮಾತನಾಡುತ್ತಿದ್ದರು. ಆಗ ಒಬ್ಬ ಅವರ ಮೇಲೆ ಶೂ ಎಸೆದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

‌‘ಪ್ರಜಾಪ್ರಭುತ್ವದ ಹಕ್ಕುಗಳಿಗಾಗಿ ನಾನು ಪ್ರಾಣವನ್ನು ತ್ಯಜಿಸಲು ತಯಾರಿದ್ದೇನೆ. ತ್ರಿವಳಿ ತಲಾಕ್‌ ಕುರಿತ ಸರ್ಕಾರದ ನಿರ್ಧಾರ ಹೆಚ್ಚು ಮಂದಿಗೆ ಒಪ್ಪಿಗೆಯಾಗಿಲ್ಲ. ಅದರಲ್ಲೂ ಮುಸ್ಲಿಮರು ಇದಕ್ಕೆ ಸಮ್ಮತಿ ಸೂಚಿಸಿಲ್ಲ. ಈ ವಿಷಯ ಅರಿಯದವರು ಈ ರೀತಿ ಮಾಡುತ್ತಿದ್ದಾರೆ’ ಎಂದರು.

‘ಇವರೆಲ್ಲ (ತಮ್ಮ ಮೇಲೆ ಚಪ್ಪಲಿ ಎಸೆದಾತನ ಕುರಿತು) ಮಹಾತ್ಮ ಗಾಂಧಿ, ಗೋವಿಂದ ಪಾನ್ಸರೆ, ನರೇಂದ್ರ ದಾಭೋಲ್ಕರ್‌ ಕೊಂದವರ ಸಿದ್ಧಾಂತವನ್ನು ಅನುಸರಿಸುವವರು. ಕೆಲವರ ಅಣತಿ ಮೆರೆಗೆ ಇಂತಹ ಘಟನೆಗಳು ನಡೆಯುತ್ತವೆ. ಜತೆಗೆ, ಇವರು ‘ದ್ವೇಷ ಸಿದ್ಧಾಂತ’ವನ್ನು ಪಾಲಿಸುವವರು’ ಎಂದು ಹೇಳಿದರು.  ‘ನಾನು ಸತ್ಯ ಮಾತನಾಡುವುದನ್ನು ಇಂತಹ ಕೃತ್ಯ ತಡೆಯಲಾರವು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry