ಸ್ನೂಕರ್‌: ಕಮಲ್‌, ಮನನ್‌ ಪ್ರಿ ಕ್ವಾರ್ಟರ್‌ಗೆ

7

ಸ್ನೂಕರ್‌: ಕಮಲ್‌, ಮನನ್‌ ಪ್ರಿ ಕ್ವಾರ್ಟರ್‌ಗೆ

Published:
Updated:
ಸ್ನೂಕರ್‌: ಕಮಲ್‌, ಮನನ್‌ ಪ್ರಿ ಕ್ವಾರ್ಟರ್‌ಗೆ

ಬೆಂಗಳೂರು: ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರರೆಂದೇ ಪರಿಗಣಿಸಲಾಗಿರುವ ಕಮಲ್ ಚಾವ್ಲಾ ಮತ್ತು ಮನನ್‌ ಚಂದ್ರ ರಾಷ್ಟ್ರೀಯ ಸ್ನೂಕರ್ ಚಾಂಪಿಯನ್‌ಷಿಪ್‌ನ ಪ್ರಿ ಕ್ವಾರ್ಟರ್‌ ಫೈನಲ್ ಫೈನಲ್ ಹಂತಕ್ಕೆ ಪ್ರವೇಶಿಸಿದರು.

ಇಲ್ಲಿನ ಕೆ.ಎಸ್‌.ಬಿ.ಎ ಸಭಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ರೈಲ್ವೆ ತಂಡವನ್ನು ಪ್ರತಿನಿಧಿಸಿದ ಚಾವ್ಲಾ ಪಂಜಾಬ್‌ನ ಧ್ರುವ್‌ ವರ್ಮಾ ಅವರನ್ನು ಮಣಿಸಿದರೆ ಮಾಜಿ ಚಾಂಪಿಯನ್‌ ಚಂದ್ರ ಮಹಾರಾಷ್ಟ್ರದ ಹಸನ್‌ ವಿರುದ್ಧ ಜಯ ಸಾಧಿಸಿದರು.

ಮೊದಲ ಫ್ರೇಮ್‌ನಲ್ಲಿ ಚಾವ್ಲಾಗೆ ಭಾರಿ ಪೈಪೋಟಿ ಎದುರಾಯಿತು. 40–42ರ ಹಿನ್ನಡೆ ಅನುಭವಿಸಿದ ಅವರು ನಂತರದ ಎರಡು ಫ್ರೇಮ್‌ಗಳಲ್ಲೂ ಕಠಿಣ ಸವಾಲು ಎದುರಿಸಿದರು. ಆದರೂ ದಿಟ್ಟ ಆಟವಾಡಿ 68–54, 65–52ರಿಂದ ಗೆದ್ದು ಮುನ್ನಡೆ ಸಾಧಿಸಿದರು. ನಾಲ್ಕನೇ ಫ್ರೇಮ್‌ನಿಂದ ಲಯ ಕಂಡುಕೊಂಡ ಅವರು ನಿರಾಯಾಸವಾಗಿ ಗೆಲುವು ಸಾಧಿಸಿದರು.

ಚಂದ್ರ ಆರಂಭದಲ್ಲೇ ಆಧಿಪತ್ಯ ಸ್ಥಾಪಿಸಿದರು. ಮೊದಲ ಎರಡು ಫ್ರೇಮ್‌ಗಳನ್ನು ಗೆದ್ದ ಅವರಿಗೆ ಮೂರನೇ ಫ್ರೇಮ್‌ನಲ್ಲಿ ಹಸನ್‌ ತಿರುಗೇಟು ನೀಡಿದರು. ಮುಂದಿನ ಎರಡು ಫ್ರೇಮ್‌ಗಳಲ್ಲಿ ಚಂದ್ರ ಗೆಲುವು ಸಾಧಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry