ಅಮೆರಿಕದ ಡ್ರೋನ್‌ ದಾಳಿ: ಹಕ್ಕಾನಿ ಕಮಾಂಡರ್‌ ಸೇರಿ ಮೂವರ ಹತ್ಯೆ

7

ಅಮೆರಿಕದ ಡ್ರೋನ್‌ ದಾಳಿ: ಹಕ್ಕಾನಿ ಕಮಾಂಡರ್‌ ಸೇರಿ ಮೂವರ ಹತ್ಯೆ

Published:
Updated:
ಅಮೆರಿಕದ ಡ್ರೋನ್‌ ದಾಳಿ: ಹಕ್ಕಾನಿ ಕಮಾಂಡರ್‌ ಸೇರಿ ಮೂವರ ಹತ್ಯೆ

ಪೆಶಾವರ: ಅಫ್ಗಾನಿಸ್ತಾನದ ಗಡಿಯಲ್ಲಿರುವ ಪಾಕಿಸ್ತಾನದ ಮನೆಯೊಂದರ ಮೇಲೆ ಅಮೆರಿಕ ನಡೆಸಿದ ಡ್ರೋನ್‌ ದಾಳಿಯಲ್ಲಿ ಹಕ್ಕಾನಿ ಕಮಾಂಡರ್‌ ಸೇರಿ ಮೂವರು ಮೃತಪಟ್ಟಿದ್ದಾರೆ ಎಂದು ಮಾದ್ಯಮಗಳು ವರದಿ ಮಾಡಿವೆ.

ಸ್ಪೀನ್‌ ಥಾಲ್‌ ಪ್ರದೇಶದ ಮನೆಯ ಮೇಲೆ ಡ್ರೋನ್‌ ಮೂಲಕ ಎರಡು ಕ್ಷಿಪಣಿಗಳನ್ನು ಪ್ರಯೋಗಿಸಲಾಗಿತ್ತು. ಹಕ್ಕಾನಿ ಜಾಲದ ಕಮಾಂಡರ್‌ ಇಹಸಾನ್‌ ಅಲಿಯಾಸ್‌ ಖವಾರಿ ಮತ್ತು  ಇಬ್ಬರು ಸಹಚರರು ಮೃತಪಟ್ಟಿದ್ದಾರೆ ಎಂದು ಡಾನ್‌ ನ್ಯೂಸ್‌ ವರದಿ ಮಾಡಿದೆ.

ಅಫ್ಗನ್‌ ನಿರಾಶ್ರಿತರಿಗೆ ಸೇರಿದ ಮನೆಗಳನ್ನು ಗುರಿಯಾಗಿಸಿ ಅಮೆರಿಕದ ಬೇಹುಗಾರಿಕೆ ವಿಮಾನಗಳು ಕ್ಷಿಪಣಿ ದಾಳಿ ನಡೆಸಿವೆ. ಹಕ್ಕಾನಿ ಜಾಲದ ಅಡಗುತಾಣದ ಮೇಲೆ ದಾಳಿ ನಡೆಸಲಾಗಿದೆ ಎಂದು ಒರಾಝೈ ಏಜೆನ್ಸಿ ಹೇಳಿದೆ.

ಪಾಕಿಸ್ತಾನ– ಅಫ್ಗನ್‌ ಗಡಿಯ ಬಾದ್‌ಶಾ ಕೊಟ್‌ ಪ್ರದೇಶದಲ್ಲಿ ಡ್ರೋನ್‌ ಮೂಲಕ ಜ. 17ರಂದು ನಡೆಸಿದ ವರ್ಷದ ಮೊದಲ ಕ್ಷಿಪಣಿ ದಾಳಿಯಲ್ಲಿ ಒಬ್ಬ ಗಂಭೀರವಾಗಿ ಗಾಯಗೊಂಡಿದ್ದ.

ಕಳೆದ ಆಗಸ್ಟ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೊಸ ಅಫ್ಗನ್‌ ನೀತಿ ಘೋಷಣೆ ಮಾಡಿದ ನಂತರ ಡ್ರೋನ್‌ ಮೂಲಕ ಕ್ಷಿಪಣಿ ದಾಳಿ ಹೆಚ್ಚಾಗಿದೆ. ಡ್ರೋನ್‌ ಮೂಲಕ ದಾಳಿ ನಡೆಸುವುದು ತಮ್ಮ ಸಾರ್ವಭೌಮತ್ವದ ಉಲ್ಲಂಘನೆ ಎಂದು ಪಾಕಿಸ್ತಾನ ಪದೇ ಪದೇ ಹೇಳಿತ್ತು. ಇದನ್ನು ನಿರಾಕರಿಸಿದ ಅಮೆರಿಕ ಇದು ತಾರತಮ್ಯವಿಲ್ಲದೆ ಭಯೋತ್ಪಾದನೆ ವಿರುದ್ಧ ನಡೆಸುವ ಕಾರ್ಯಾಚರಣೆ ಎಂದು ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry