ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ತಂಡಕ್ಕೆ ಭರ್ಜರಿ ಜಯ

Last Updated 24 ಜನವರಿ 2018, 19:30 IST
ಅಕ್ಷರ ಗಾತ್ರ

ಕೋಲ್ಕತ್ತ: ಆರಂಭಿಕ ಬ್ಯಾಟ್ಸ್‌ಮನ್‌ ಕರುಣ್‌ ನಾಯರ್ ಅವರ ಸ್ಫೋಟಕ ಶತಕ (100; 52 ಎ, 7 ಸಿ, 8 ಬೌಂ) ಮತ್ತು ಮೂರನೇ ಕ್ರಮಾಂಕದ ಪವನ್ ದೇಶಪಾಂಡೆ ಗಳಿಸಿದ ಅಮೋಘ ಅರ್ಧಶತಕ (56; 39 ಎ, 1 ಸಿ, 6 ಬೌಂ) ಕರ್ನಾಟಕಕ್ಕೆ ಭರ್ಜರಿ ಜಯ ಗಳಿಸಿಕೊಟ್ಟಿತು.

ಇಲ್ಲಿನ ಈಡನ್‌ ಗಾರ್ಡನ್ಸ್ ಕ್ರೀಡಾಂಗಣಲ್ಲಿ ಬುಧವಾರ ನಡೆದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಕರ್ನಾಟಕ 123 ರನ್‌ಗಳಿಂದ ಜಾರ್ಖಂಡ್‌ ತಂಡವನ್ನು ಮಣಿಸಿತು. ಕರ್ನಾಟಕದ 201 ರನ್‌ ಮೊತ್ತವನ್ನು ಬೆನ್ನತ್ತಿದ ಜಾರ್ಖಂಡ್‌ 78 ರನ್‌ಗಳಿಗೆ ಆಲೌಟಾಯಿತು.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕರ್ನಾಟಕ ಭರವಸೆಯ ಬ್ಯಾಟ್ಸ್‌ಮನ್‌ ಮಯಂಕ್‌ ಅಗರವಾಲ್‌ ಮೊದಲ ಓವರ್‌ನಲ್ಲೇ ಶೂನ್ಯಕ್ಕೆ ಔಟಾದರು. ನಂತರ ಕರುಣ್ ನಾಯರ್ ಮತ್ತು ಬಿ.ಆರ್.ಶರತ್‌ 38 ರನ್‌ಗಳನ್ನು ಕಲೆ ಹಾಕಿದರು. ಶರತ್ ಔಟಾದ ನಂತರ ಕರುಣ್‌ ಜೊತೆಗೂಡಿದ ಪವನ್ ದೇಶಪಾಂಡೆ 130 ರನ್‌ ಸೇರಿಸಿ ತಂಡ ಉತ್ತಮ ಮೊತ್ತ ಗಳಿಸಲು ನೆರವಾದರು.

ಭಾರಿ ಗುರಿ ಬೆನ್ನತ್ತಿದ ಜಾರ್ಖಂಡ್‌ಗೆ ಪ್ರತಿರೋಧ ಒಡ್ಡಲು ಸಾಧ್ಯವಾಗಲಿಲ್ಲ.

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ: 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 201 (ಕರುಣ್‌ ನಾಯರ್‌ 100, ಪವನ್ ದೇಶಪಾಂಡೆ 56; ಮೋನು ಕುಮಾರ್‌ 16ಕ್ಕೆ2); ಜಾರ್ಖಂಡ್‌: 14.2 ಓವರ್‌ಗಳಲ್ಲಿ 78 (ವಿಕಾಸ್‌ 25; ಎಂ.ಪ್ರಸಿದ್ಧಕೃಷ್ಣ 8ಕ್ಕೆ2, ಅಭಿಮನ್ಯ ಮಿಥುನ್‌ 23ಕ್ಕೆ2, ಎಸ್‌.ಅರವಿಂದ್‌ 6ಕ್ಕೆ2, ಜೆ.ಸುಚಿತ್‌ 13ಕ್ಕೆ2). ಫಲಿತಾಂಶ: ಕರ್ನಾಟಕಕ್ಕೆ 123 ರನ್‌ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT