ಭಾರತೀಯ ಸಂಜಾತ ಐಎಸ್‌ ಉಗ್ರ ಜಾಗತಿಕ ಭಯೋತ್ಪಾದಕ : ಅಮೆರಿಕ ಘೋಷಣೆ

7

ಭಾರತೀಯ ಸಂಜಾತ ಐಎಸ್‌ ಉಗ್ರ ಜಾಗತಿಕ ಭಯೋತ್ಪಾದಕ : ಅಮೆರಿಕ ಘೋಷಣೆ

Published:
Updated:
ಭಾರತೀಯ ಸಂಜಾತ ಐಎಸ್‌ ಉಗ್ರ ಜಾಗತಿಕ ಭಯೋತ್ಪಾದಕ : ಅಮೆರಿಕ ಘೋಷಣೆ

ವಾಷಿಂಗ್ಟನ್‌: ಭಾರತೀಯ ಸಂಜಾತ ಐ.ಎಸ್‌ ಉಗ್ರ ಬ್ರಿಟನ್‌ನ ಸಿದ್ದಾರ್ಥ್‌ ಧರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಅಮೆರಿಕ ಘೋಷಿಸಿದೆ.

ಧರ್‌ ಒಬ್ಬ ಬ್ರಿಟಿಷ್‌ ಹಿಂದೂವಾಗಿದ್ದು ಇಸ್ಲಾಂಗೆ ಮತಾಂತರಗೊಂಡವನು. ಅಬ ರುಮೈಸಾ ಎಂದು ಹೆಸರು ಬದಲಾಯಿಸಿಕೊಂಡಿದ್ದಾನೆ.  ಬ್ರಿಟನ್‌ನಿಂದ ಸಿರಿಯಾಕ್ಕೆ ಪತ್ನಿ ಮತ್ತು ಮಗುವಿನ ಜೊತೆ ತೆರಳುವ ಸಲುವಾಗಿ 2014ರಲ್ಲಿ ಆತ ಪೊಲೀಸರಿಂದ ತಪ್ಪಿಸಿಕೊಂಡಿದ್ದ.

ಬ್ರಿಟನ್‌ಗಾಗಿ ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂಬ ಆರೋಪದಲ್ಲಿ ಐಎಸ್‌ನಿಂದ ಬಂಧನಕ್ಕೊಳಗಾದ ಹಲವಾರು ಕೈದಿಗಳ ಜೊತೆ ವಿಡಿಯೊದಲ್ಲಿ ಕಾಣಿಸಿಕೊಂಡಿದ್ದ ಮುಸುಕುಧಾರಿಗಳಲ್ಲಿ ಈತನೂ ಒಬ್ಬ ಎಂದು ನಂಬಲಾಗಿದೆ ಎಂದು ರಾಜ್ಯ ಇಲಾಖೆ ಹೇಳಿದೆ.

ಬೆಲ್ಜಿಯಂ ಸಂಜಾತ ಮೊರಾಕ್ಕೊ ಪ್ರಜೆ ಅಬ್ದೆಲತೀಫ್‌ ಗೈನಿಯನ್ನು ಕೂಡಾ ಧರ್ ಜೊತೆ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry