ವಿದ್ಯಾರ್ಥಿಯಿಂದ ಗುಂಡಿನ ದಾಳಿ: ಇಬ್ಬರು ಸಹಪಾಠಿಗಳ ಸಾವು

5

ವಿದ್ಯಾರ್ಥಿಯಿಂದ ಗುಂಡಿನ ದಾಳಿ: ಇಬ್ಬರು ಸಹಪಾಠಿಗಳ ಸಾವು

Published:
Updated:
ವಿದ್ಯಾರ್ಥಿಯಿಂದ ಗುಂಡಿನ ದಾಳಿ: ಇಬ್ಬರು ಸಹಪಾಠಿಗಳ ಸಾವು

ಬೆಂಟನ್‌: ಇಲ್ಲಿನ ಕೆಂಟುಕಿಯ ಮಾರ್ಷಲ್‌ ಕೌಂಟಿ ಹೈಸ್ಕೂಲಿನ ಹದಿನೈದರ ಹರೆಯದ ವಿದ್ಯಾರ್ಥಿಯೊಬ್ಬ ತರಗತಿಯಲ್ಲಿ ಬುಧವಾರ ಗುಂಡಿನ ದಾಳಿ ನಡೆಸಿದ್ದಾನೆ.

ದಾಳಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದು 17 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಐವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಆತ ಏನು ಮಾಡುತ್ತಿದ್ದಾನೆ ಎಂದು ನನಗೆ ಗೊತ್ತಾಗಿತ್ತು. ನಾನು ನನ್ನ ಗೆಳತಿಯನ್ನು ಎಳೆದುಕೊಂಡು ತರಗತಿಯಿಂದ ಹೊರಬಂದೆ. ಉಳಿದ ಸ್ನೇಹಿತರು ನೆಲದ ಮೇಲೆ ಬಿದ್ದಿದ್ದರು’ ಎಂದು ವಿದ್ಯಾರ್ಥಿನಿ ಅಲೆಕ್ಸಾಂಡ್ರಿಯಾ ಕ್ಯಾಪೊರಲಿ ಹೇಳಿದ್ದಾಳೆ.

ಆತ ಗುಂಡು ಹಾರಿಸುತ್ತಲೇ ಇದ್ದ. ನಂತರ ಅಲ್ಲಿಂದ ಓಡಲು ಯತ್ನಿಸಿದ. ಅಷ್ಟರಲ್ಲಿ ಪೊಲೀಸರು ಬಂಧಿಸಿದರು ಎಂದು ಆಕೆ ಹೇಳಿದ್ದಾಳೆ.

ಶಾಲಾ ದಾಳಿಯ ಕುರಿತು ಅಧಿಕಾರಿಗಳು ಯಾರನ್ನೂ ಹೊಣೆ ಮಾಡಿಲ್ಲ. ಈ ಕುರಿತು ಯಾವುದೇ ಮಾಹಿತಿಯನ್ನು ಹೊರಹಾಕಿಲ್ಲ. ಆರೋಪಿಯ ಮನೆ ಮತ್ತು ಹಿನ್ನೆಲೆಯ ಬಗ್ಗೆ  ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಕೆಂಟುಕಿ ಪೊಲೀಸ್‌ ಲೆಫ್ಟಿನೆಂಟ್‌ ಮೈಕೆಲ್‌ ವಬ್‌ ತಿಳಿಸಿದ್ದಾರೆ.

ಒಬ್ಬ ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry