ಬಿ.ಟೆಕ್‌ನಲ್ಲಿ ಭಾರತೀಯ ಮೌಲ್ಯ ಪಠ್ಯ

7

ಬಿ.ಟೆಕ್‌ನಲ್ಲಿ ಭಾರತೀಯ ಮೌಲ್ಯ ಪಠ್ಯ

Published:
Updated:
ಬಿ.ಟೆಕ್‌ನಲ್ಲಿ ಭಾರತೀಯ ಮೌಲ್ಯ ಪಠ್ಯ

ನವದೆಹಲಿ: ಬಿ.ಟೆಕ್‌ ಕೋರ್ಸ್‌ಗಳ ಪಠ್ಯಕ್ರಮವನ್ನು ಕೇಂದ್ರ ಸರ್ಕಾರ ಪರಿಷ್ಕರಿಸಿದೆ. ಅದರಂತೆ, ಈ ಕೋರ್ಸ್‌ನ ವಿದ್ಯಾರ್ಥಿಗಳು ಆರು ವಾರಗಳ ಇಂಟರ್ನ್‌ಶಿಪ್‌ ಮಾಡುವುದು ಕಡ್ಡಾಯ.

ಜತೆಗೆ, ಪರಿಸರ ಅಧ್ಯಯನವನ್ನು ಒಂದು ವಿಷಯವಾಗಿ ಕಲಿಯಬೇಕು. ಅಷ್ಟಲ್ಲದೆ, ಭಾರತೀಯ ಮೌಲ್ಯ ಹಾಗೂ ನೈತಿಕತೆಯನ್ನೂ ಅಭ್ಯಾಸ

ಮಾಡಬೇಕು. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಾಂಪ್ರದಾಯಿಕ ಜ್ಞಾನ ಮತ್ತು ಪ್ರಾಚೀನ ವಿವೇಕ ಎಂಬ ವಿಷಯವೂ ಬಿ.ಟೆಕ್‌ನ ಪರಿಷ್ಕೃತ ಪಠ್ಯಕ್ರಮದಲ್ಲಿ ಸೇರ್ಪಡೆಯಾಗಿದೆ.

ಭಾರತೀಯ ವಿಜ್ಞಾನ ಸಂಸ್ಥೆಗಳ (ಐಐಟಿ) ಪ್ರಾಧ್ಯಾಪಕರು ಮತ್ತು ಕೈಗಾರಿಕಾ ಕ್ಷೇತ್ರದ ಪರಿಣತರು ಇದ್ದ ಸಮಿತಿಯು ಪಠ್ಯಕ್ರಮಕ್ಕೆ ಹೊಸ ರೂಪ ಕೊಟ್ಟಿದೆ. 15 ವರ್ಷಗಳ ಬಳಿಕ ಇದೇ ಮೊದಲ ಬಾರಿ ಬಿ.ಟೆಕ್‌ ಪಠ್ಯಕ್ರಮವನ್ನು ಬದಲಾಯಿಸಲಾಗಿದೆ. ಎಂಜಿನಿಯರಿಂಗ್‌ ಪದವಿ ಕೋರ್ಸ್‌ಗಳಲ್ಲಿ ತರಗತಿ ಪಾಠದ ಅವಧಿಯನ್ನು ಗಣನೀಯವಾಗಿ ಕಡಿತಗೊಳಿಸಿ ಚಟುವಟಿಕೆ ಆಧರಿತ ಕಲಿಕೆಗೆ ಮಹತ್ವ ನೀಡಲಾಗಿದೆ. ಕೈಗಾರಿಕೆಗಳಿಗೆ ಬೇಕಾದ ರೀತಿಯಲ್ಲಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ತರಗತಿ ಅವಧಿಯನ್ನು 200 ತಾಸಿನಿಂದ 160 ತಾಸಿಗೆ ಇಳಿಸಲಾಗಿದೆ. ವಿದ್ಯಾರ್ಥಿಗಳ ಪ್ರಗತಿಯ ಮೇಲೆ ನಿರಂತರ ನಿಗಾ ಇರಿಸುವುದಕ್ಕೂ ಅವಕಾಶ ಕಲ್ಪಿಸಲಾಗಿದೆ.

ಬಿ.ಟೆಕ್‌ ಕೋರ್ಸ್‌ಗೆ ಸೇರುವ ವಿದ್ಯಾರ್ಥಿಗಳಿಗೆ ಮೊದಲ ಮೂರು ವಾರಗಳ ಸೇರ್ಪಡೆ ತರಬೇತಿ ಕಡ್ಡಾಯ. ವಿವಿಧ ಚಿಂತನೆಗಳು, ಹಿನ್ನೆಲೆಗಳಿಂದ ಬರುವ ವಿದ್ಯಾರ್ಥಿಗಳು ಹೊಸ ಪರಿಸರಕ್ಕೆ ಹೊಂದಿಕೊಳ್ಳುವುದಕ್ಕೆ ಅನುಕೂಲವಾಗುವಂತೆ ಈ ತರಬೇತಿಯನ್ನು ವಿನ್ಯಾಸ ಮಾಡಲು ನಿರ್ಧರಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry