ಮರಗಳ್ಳರಿಂದ ಪತ್ರಕರ್ತನ ಮೇಲೆ ಹಲ್ಲೆ

7

ಮರಗಳ್ಳರಿಂದ ಪತ್ರಕರ್ತನ ಮೇಲೆ ಹಲ್ಲೆ

Published:
Updated:

ಶಿಲ್ಲಾಂಗ್‌: ಮರಗಳ್ಳ ಸಾಗಾಣಿಕೆದಾರರ ಕುರಿತು ತನಿಖಾ ವರದಿ ಮಾಡಲು ತೆರಳಿದ್ದ ಪತ್ರಕರ್ತನ ಮೇಲೆ ಮಂಗಳವಾರ ರಾತ್ರಿ ಹಲ್ಲೆ ನಡೆಸಲಾಗಿದೆ.

‘ಮೇಘಾಲಯದ ಪಶ್ಚಿಮ ಕಾಶಿ ಹಿಲ್ಸ್‌ ಜಿಲ್ಲೆಯ ಅಥಿಯಾಬರಿಯಲ್ಲಿ ಈ ಘಟನೆ ನಡೆದಿದೆ. ಪತ್ರಕರ್ತ ಬಿಪ್ಲಾಪ್‌ ಡೇ ಎನ್ನುವವರು ಗಾಯಗೊಂಡಿದ್ದು, ಅವರ ಕ್ಯಾಮೆರಾ ಹಾಗೂ ಮೊಬೈಲ್‌ಗೆ ಮರಗಳ್ಳರು ಹಾನಿ ಮಾಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಅಥಿಯಾಬರಿ ಪ್ರದೇಶದಲ್ಲಿ ನಡೆಯುತ್ತಿದ್ದ ಮರಗಳ ಅಕ್ರಮ ಸಾಗಾಣಿಕೆ ಕುರಿತು ವರದಿ ಮಾಡಲು ಚಾಲಕ ಹಾಗೂ ಸ್ನೇಹಿತರ ಜತೆ ಡೇ ತೆರಳಿದ್ದರು.

‘ನಮಗೆ ಈ ಪ್ರಕರಣದ ಕುರಿತು ಮಾಹಿತಿ ಬಂದಿದ್ದು, ತನಿಖೆ ನಡೆಸುತ್ತಿದ್ದೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಡಿ ಖಾರ್‌ವಾನ್‌ಲಾಂಗ್‌ ತಿಳಿಸಿದ್ದಾರೆ. ಪತ್ರಕರ್ತನ ಮೇಲಿನ ಹಲ್ಲೆಯನ್ನು ಶಿಲ್ಲಾಂಗ್‌ ಪ್ರೆಸ್‌ ಕ್ಲಬ್‌ ಖಂಡಿಸಿದ್ದು, ತಕ್ಷಣವೇ ಆರೋಪಿಗಳನ್ನು ಬಂಧಿಸಬೇಕು ಎಂದು

ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry