ಗಣರಾಜ್ಯೋತ್ಸವ: ಬಿಗಿ ಬಂದೋಬಸ್ತ್‌

7

ಗಣರಾಜ್ಯೋತ್ಸವ: ಬಿಗಿ ಬಂದೋಬಸ್ತ್‌

Published:
Updated:

ಬೆಂಗಳೂರು: ‘ಇಲ್ಲಿನ ಫೀಲ್ಡ್‌ ಮಾರ್ಷಲ್‌ ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ಇದೇ 26ರಂದು ನಡೆಯುವ ಗಣರಾಜ್ಯೋತ್ಸವ ದಿನಾಚರಣೆಗೆ ಸಕಲ ಸಿದ್ಧತೆ ಮಾಡಲಾಗಿದೆ’ ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅತಿ ಗಣ್ಯರಿಗೆ 2,000 ಆಸನ, ಸ್ವಾತಂತ್ರ್ಯ ಹೋರಾಟಗಾರರು, ರಕ್ಷಣಾ ಇಲಾಖೆ ಅಧಿಕಾರಿಗಳು, ಪತ್ರಿಕಾ ಪ್ರತಿನಿಧಿಗಳಿಗೆ 2,500 ಆಸನ, ನಿವೃತ್ತ ಸೇನಾಧಿಕಾರಿಗಳು, ಬಿಎಸ್‌ಎಫ್‌ ಅಧಿಕಾರಿಗಳು, ಇತರ ಇಲಾಖೆ ಅಧಿಕಾರಿಗಳಿಗೆ 3,000 ಆಸನ, ಸಾರ್ವಜನಿ

ಕರಿಗೆ 4,000 ಆಸನಗಳ ವ್ಯವಸ್ಥೆ ಇದ್ದು, ಸಾರ್ವಜನಿಕರ ವೀಕ್ಷಣಾ ಗ್ಯಾಲರಿಯನ್ನು ಈ ಬಾರಿ ವಿಸ್ತರಿಸಿದ್ದೇವೆ’ ಎಂದರು.

ಪೊಲೀಸ್‌ ಆಯುಕ್ತ ಟಿ.ಸುನೀಲ್‌ ಕುಮಾರ್‌,‘ ಮೈದಾನದಲ್ಲಿ 15 ದಿನಗಳಿಂದ 75 ಪೊಲೀಸ್‌ ಅಧಿಕಾರಿಗಳು ಭದ್ರತಾ ವ್ಯವಸ್ಥೆಯಲ್ಲಿ ತೊಡಗಿದ್ದಾರೆ. ನಗರದ ಹೋಟೆಲ್‌, ಲಾಡ್ಜ್‌ ಹಾಗೂ ಇತರ ತಂಗುದಾಣಗಳಲ್ಲಿ ಅನುಮಾನಾಸ್ಪದವಾಗಿ ಉಳಿಯುವವರ ಮೇಲೆ ನಿಗಾ ಇಡುತ್ತೇವೆ’ ಎಂದರು. 

‘ನಗರದ 9 ಡಿಸಿಪಿ, 16 ಎಸಿಪಿ, 51 ಇನ್‌ಸ್ಪೆಕ್ಟರ್‌ಗಳು, 92 ಪಿಎಸ್‌ಐ, 16 ಮಹಿಳಾ ಪಿಎಸ್‌ಐ, 77 ಎಎಸ್‌ಐ, 535 ಎಚ್‌ಸಿ/ಪಿಸಿ, 71 ಮಹಿಳಾ ಸಿಬ್ಬಂದಿ, 56 ಕ್ಯಾಮೆರಾ ಸಿಬ್ಬಂದಿಯನ್ನು ಮೈದಾನದಲ್ಲಿನ ಭದ್ರತೆಗಾಗಿ ನಿಯೋಜಿಸಲಾಗಿದೆ’ ಎಂದರು.

‘ಸಿಗರೇಟ್‌, ಬೆಂಕಿಪೊಟ್ಟಣ, ಕರಪತ್ರ, ಬಣ್ಣದ ದ್ರಾವಣ, ನೀರಿನ ಬಾಟಲ್‌, ಶಸ್ತ್ರಾಸ್ತ್ರ, ಕಪ್ಪು ಕರವಸ್ತ್ರ, ತಿನಿಸು, ಮದ್ಯ, ಬಾವುಟ, ‍ಸ್ಫೋಟಕಗಳನ್ನು ಸಾರ್ವಜನಿಕರು ತರಬಾರದು’ ಎಂದು ಅವರು ತಿಳಿಸಿದರು.

ಮೊಬೈಲ್‌ ಕ್ಯಾಂಟಿನ್‌ ಆರಂಭ: ‘ಇಂದಿರಾ ಮೊಬೈಲ್‌ ಕ್ಯಾಂಟೀನ್‌ಗಳನ್ನು ಗಣರಾಜ್ಯೋತ್ಸವದ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದ ಮುಂಭಾಗ ಉದ್ಘಾಟಿಸುವರು’ ಎಂದು ಮಂಜುನಾಥ ಪ್ರಸಾದ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry