ಅಂಗವಿಕಲರಿಗೆ ಸ್ಕೂಟರ್ ವಿತರಣೆ

7

ಅಂಗವಿಕಲರಿಗೆ ಸ್ಕೂಟರ್ ವಿತರಣೆ

Published:
Updated:
ಅಂಗವಿಕಲರಿಗೆ ಸ್ಕೂಟರ್ ವಿತರಣೆ

ಬೆಂಗಳೂರು: ಅಂಗವಿಕಲರಿಗೆ ಉಚಿತವಾಗಿ 10 ಸ್ಕೂಟರ್‌ಗಳನ್ನು ಹಾಗೂ ಬಿಬಿಎಂಪಿ ಸಹಾಯಧನ ಯೋಜನೆಯಡಿ ಫಲಾನುಭವಿಗಳಿಗೆ ಆಟೊ ಹಾಗೂ ಸರಕು ಸಾಗಣೆ ವಾಹನಗಳನ್ನು ರಾಜರಾಜೇಶ್ವರಿನಗರದ ಶಾಸಕ ಮುನಿರತ್ನ ಲಕ್ಷ್ಮೀದೇವಿನಗರದಲ್ಲಿ ಹಸ್ತಾಂತರಿಸಿದರು.

ಬಳಿಕ ಮಾತನಾಡಿದ ಶಾಸಕ, ‘ನಿರುದ್ಯೋಗಿಗಳಿಗೆ ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಅವುಗಳನ್ನು ಪಡೆದು ಆರ್ಥಿಕವಾಗಿ ಮುಂದುವರೆಯಬೇಕು’ ಎಂದು ಕಿವಿಮಾತು ಹೇಳಿದರು.

ಬಿಬಿಎಂಪಿ ಸದಸ್ಯ ವೇಲುನಾಯ್ಕರ್, ‘ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ 3,500 ಮನೆಗಳ ನವೀಕರಣ ಕಾಮಗಾರಿಗೆ ಚಾಲನೆ ಸಿಕ್ಕಿದೆ. ಎಲ್ಲ ಮನೆಗಳಿಗೂ ಕಾವೇರಿ ನೀರು, ಶೌಚಾಲಯ, ಒಳಚರಂಡಿ, ವಿದ್ಯುತ್ ಸಂಪರ್ಕ ಕಲ್ಪಿಸುತ್ತೇವೆ. ವಾರ್ಡಿನ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿಸುತ್ತೇವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry