ಮದ್ದೂರು, ಮಾಗಡಿಯಲ್ಲಿ ಚಿರತೆ ಸೆರೆ

7

ಮದ್ದೂರು, ಮಾಗಡಿಯಲ್ಲಿ ಚಿರತೆ ಸೆರೆ

Published:
Updated:
ಮದ್ದೂರು, ಮಾಗಡಿಯಲ್ಲಿ ಚಿರತೆ ಸೆರೆ

ರಾಮನಗರ: ಮಾಗಡಿ ತಾಲ್ಲೂಕಿನ ಸೋಲೂರು ಹೋಬಳಿಯ ಗಂಗೇನಪುರದಲ್ಲಿರುವ ಕೋಳಿ ಫಾರಂ ಹೊಕ್ಕಿದ್ದ ಚಿರತೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ‌ ಸೆರೆ ಹಿಡಿದಿದ್ದಾರೆ.

ಮಾಜಿ‌ ಸೈನಿಕ ನರಸಿಂಹ ಎಂಬುವರಿಗೆ ಸೇರಿದ ಕೋಳಿಫಾರಂಗೆ ಬುಧವಾರ ಮಧ್ಯರಾತ್ರಿ 12.30ರ ಸುಮಾರಿಗೆ ಚಿರತೆಯು ಪ್ರವೇಶಿಸಿತ್ತು. ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದರು. ಇಲಾಖೆಯ ಸಿಬ್ಬಂದಿ ಬೋನು ತಂದು, ಫಾರಂ ಕಟ್ಟಡದ ತಂತಿಗಳನ್ನು ತುಂಡರಿಸಿ ಬೋನಿನ ಒಳಗೆ ಇಟ್ಟರು. ಅದರೊಳಗೆ ಇರಿಸಲಾಗಿದ್ದ ನಾಯಿ ಮರಿಯ ಆಸೆಗೆ ಒಳನುಗ್ಗಿದ ಚಿರತೆ ಸೆರೆಯಾಯಿತು.

ಅರಣ್ಯ ಇಲಾಖೆಯ ವಲಯಾಧಿಕಾರಿ ವಿಶ್ವನಾಥ್ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.

ಸುಮಾರು ಮೂರುವರೆ ವರ್ಷ ವಯಸ್ಸಿನ ಗಂಡು ಚಿರತೆ ಇದಾಗಿದೆ. ಬನ್ನೇರುಘಟ್ಟ ಅರಣ್ಯಕ್ಕೆ ಬಿಡಲಾಗುವುದು ಎಂದು ಅವರು ತಿಳಿಸಿದರು.

ಮಂಡ್ಯ: ಮದ್ದೂರು ತಾಲ್ಲೂಕಿನ ಯರಗನಹಳ್ಳಿಯಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಸೆರೆಯಾದ ಚಿರತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry