ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವಧಿಯಲ್ಲಿ ದಲಿತರ ಮೇಲೆ ದೌರ್ಜನ್ಯ: ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಂ ಆರೋಪ

7

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವಧಿಯಲ್ಲಿ ದಲಿತರ ಮೇಲೆ ದೌರ್ಜನ್ಯ: ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಂ ಆರೋಪ

Published:
Updated:
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವಧಿಯಲ್ಲಿ ದಲಿತರ ಮೇಲೆ ದೌರ್ಜನ್ಯ: ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಂ ಆರೋಪ

ಹಾಸನ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಂ ವಾಗ್ದಾಳಿ ನಡೆಸಿದ್ದು, ರೋಹಿಣಿ ಅವಧಿಯಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿದ್ದಾರೆ.

‘ಭ್ರಷ್ಟಾಚಾರ ನಡೆಯುತ್ತಿದೆ, ಒಂದೇ ಒಂದು ಜನತಾದರ್ಶನ ಮಾಡಿಲ್ಲ, ಇವರು ದಕ್ಷರಾ? ಪ್ರಾಮಾಣಿಕರಾ? ಎಂದು ಪ್ರಶ್ನೆಸಿದ್ದಾರೆ.

ಮಸ್ತಕಾಭಿಷೇಕ ಕೆಲಸ ಮಾಡುತ್ತಿರುವವರು ಇವರು ಒಬ್ಬರೇನಾ? ಇವರ ವಿರುದ್ಧ ತನಿಖೆಗೆ ಗೃಹ ಸಚಿವರಿಗೆ ದಾಖಲೆ ನೀಡುವೆ. ಇಂಥ ಡಿಸಿಯನ್ನು ವರ್ಗ ಮಾಡಿದ್ದು ಸರಿ’ ಎಂದು ಸರಕಾರದ ಕ್ರಮ ಸಮರ್ಥಿಸಿಕೊಂಡರು.

ರುದ್ರಭೂಮಿಗಾಗಿ ಪ್ರತಿಭಟನೆ ನಡೆಸಿದವರ ವಿರುದ್ದ ಕ್ರಮ‌ ಕೈಗೊಳ್ಳದಿದ್ದರೆ ಎಸ್‌ಪಿ ವಿರುದ್ಧ ಸರ್ಕಾರಕ್ಕೆ ಗುಪ್ತ ವರದಿ ನೀಡುವುದಾಗಿ ಡಿಸಿ ಬೆದರಿಕೆ ಹಾಕಿದ್ದಾರೆ. ಎಸ್‌ಪಿ ಸಹ ಅಸಹಾಯಕರಾಗಿದ್ದರು. ಉಸ್ತುವಾರಿ ಸಚಿವ ಎ.ಮಂಜು ಸಿಎಂ ಮೇಲೆ ಒತ್ತಡ ಹಾಕಿದ್ದು ನಿಜ ಎಂದಿದ್ದಾರೆ.

ಡಿಸಿ ವರ್ಗ ನಂತರ ಶಿವರಾಂ ತನ್ನ ಬೆಂಬಲಿಗನೊಂದಿಗೆ ಆಡಿದ ಮಾತಿನ ಆಡಿಯೊ ರೆಕಾರ್ಡ್‌ ವೈರಲ್ ಆಗಿತ್ತು.

ಇನ್ನಷ್ಟು ಓದು:

 ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಯಲ್ಲಿ ಕೆಪಿಸಿಸಿ‌ ಉಪಾಧ್ಯಕ್ಷ ಬಿ.ಶಿವರಾಂ ಕೈವಾಡ?

ಹಾಸನ: ನಾಲ್ಕೂವರೆ ವರ್ಷಗಳಲ್ಲಿ ಐದು ಜಿಲ್ಲಾಧಿಕಾರಿಗಳ ಬದಲಾವಣೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry