ಈ ವಾರ ತೆರೆಗೆ

7

ಈ ವಾರ ತೆರೆಗೆ

Published:
Updated:
ಈ ವಾರ ತೆರೆಗೆ

ಐ - ಯು (ಐ ಡ್ಯಾಶ್ ಯು)

ಕವಿ ಹೃದಯ ಟಾಕೀಸ್ ಲಾಂಛನದಲ್ಲಿ ಕವಿತಾ ರಘು ಅವರು ನಿರ್ಮಿಸಿರುವ ‘ಐ – ಯು’ ಚಿತ್ರವನ್ನು ಕೇಶವ ಚಂದು ನಿರ್ದೇಶಿಸಿದ್ದಾರೆ. ನಿರ್ದೇಶನದ ಜತೆಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಗೀತರಚನೆಯನ್ನೂ ಮಾಡಿದ್ದಾರೆ. ಸಿ.ಎಸ್ ಮಹದೇವ್ ಛಾಯಾಗ್ರಹಣ ಹಾಗೂ ವೆಂಕಟೇಶ್ ಅವರ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಪ್ರಮೋದ್, ಲಕ್ಕಿ, ಕಲ್ಯಾಣಿ, ಸುವರ್ಣ ಮುಂತಾದವರಿದ್ದಾರೆ.

ಚೂರಿಕಟ್ಟೆ

ಟಿಂಬರ್ ಮಾಫಿಯಾ, ಶ್ರೀಗಂಧದ ಕಳ್ಳಸಾಗಣೆಯನ್ನು ಎಳೆಯನ್ನಾಗಿಟ್ಟುಕೊಂಡಿರುವ ‘ಚೂರಿಕಟ್ಟೆ’ ಸಿನಿಮಾವನ್ನು ರಾಘು ಶಿವಮೊಗ್ಗ ನಿರ್ದೇಶಿಸಿದ್ದಾರೆ. ಮಾರ್ನಿಂಗ್ ಸ್ಟಾರ್ ಪಿಕ್ಚರ್ಸ್ ಲಾಂಛನದಲ್ಲಿ ಎಸ್. ನಯಾಜುದ್ದೀನ್, ತುಳಸಿರಾಮುಡು ಹಣ ಹೂಡಿದ್ದಾರೆ. ಅದ್ವೈತ್‌ ಗುರುಮೂರ್ತಿ ಛಾಯಾಗ್ರಹಣ, ವಾಸಕೀ ವೈಭವ್ ಸಂಗೀತ, ಜಯಂತ್ ಕಾಯ್ಕಿಣಿ, ಕೆ. ಕಲ್ಯಾಣ್, ಕವಿರಾಜ್, ಗೌಸ್‍ಪೀರ್, ಡಿ. ಸತ್ಯಪ್ರಕಾಶ್ ಸಾಹಿತ್ಯವಿದೆ. ಪ್ರವೀಣ್ ತೇಜ, ಪ್ರೇರಣಾ, ದತ್ತಣ್ಣ, ಅಚ್ಯುತ್‍ಕುಮಾರ್, ಶರತ್ ಲೋಹಿತಾಶ್ವ, ಬಾಲಾಜಿ, ಮನೋಹರ್, ಪ್ರಮೋದ್ ಶೆಟ್ಟಿ, ಕಿರಣ್ ನಾಯಕ್, ಮಂಜುನಾಥ್ ಹೆಗ್ಡೆ ಮುಂತಾದವರ ತಾರಾಬಳಗವಿದೆ.

ಕನಕ

ಚಂದ್ರು ನಿರ್ಮಿಸಿ ನಿರ್ದೇಶಿಸುತ್ತಿರುವ ಚಿತ್ರ ‘ಕನಕ’. ದುನಿಯಾ ವಿಜಯ್‌ ನಾಯಕನಾಗಿ ನಟಿಸಿರುವ ಈ ಚಿತ್ರಕ್ಕೆ ಮಾನ್ವಿತಾ ಹರೀಶ್‌ ಮತ್ತು ಹರಿಪ್ರಿಯಾ ನಾಯಕಿಯರು. ಸಾಧುಕೋಕಿಲ, ರಂಗಾಯಣ ರಘು, ರವಿಶಂಕರ್, ಶ್ರೀನಿವಾಸಮೂರ್ತಿ, ಅಚ್ಯುತರಾವ್, ಪದ್ಮಜಾರಾವ್, ಸುಧಾ ಬೆಳವಾಡಿ ತಾರಾಗಣದಲ್ಲಿದ್ದಾರೆ. ಸತ್ಯ ಹೆಗಡೆ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ನವೀನ್ ಸಜ್ಜು ಸಂಗೀತ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry