ಉಪೇಂದ್ರ ನೇತೃತ್ವದ ಕೆಪಿಜೆಪಿ 'ಶಿಕ್ಷಣ ಪ್ರಣಾಳಿಕೆ' ಬಿಡುಗಡೆ

7

ಉಪೇಂದ್ರ ನೇತೃತ್ವದ ಕೆಪಿಜೆಪಿ 'ಶಿಕ್ಷಣ ಪ್ರಣಾಳಿಕೆ' ಬಿಡುಗಡೆ

Published:
Updated:
ಉಪೇಂದ್ರ ನೇತೃತ್ವದ ಕೆಪಿಜೆಪಿ 'ಶಿಕ್ಷಣ ಪ್ರಣಾಳಿಕೆ' ಬಿಡುಗಡೆ

ಬೆಂಗಳೂರು: ಉಪೇಂದ್ರ ನೇತೃತ್ವದ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ(ಕೆಪಿಜೆಪಿ) ಶಿಕ್ಷಣದ ಬಗ್ಗೆ ಸಂಭಾವ್ಯ ಪ್ರಣಾಳಿಕೆ(ಭಾಗ 3)ಯನ್ನು ಗುರುವಾರ ಬಿಡುಗಡೆ ಮಾಡಲಾಗಿದೆ.

ಪ್ರಣಾಳಿಕೆ ಓದಿ ಅಭಿಪ್ರಾಯ ಹಾಗೂ ಸಲಹೆ ಹಂಚಿಕೊಳ್ಳುವಂತೆ ಉಪೇಂದ್ರ ಟ್ವೀಟ್‌ ಮಾಡಿದ್ದಾರೆ. ಪ್ರಾಥಮಿಕ, ಮಾಧ್ಯಮಿಕ ಹಾಗೂ ಉನ್ನತ ಶಿಕ್ಷಣಕ್ಕೆ ಮೀಸಲಿಟ್ಟ 22,662 ಕೋಟಿ ರೂಪಾಯಿ ರಾಜ್ಯ ಬಜೆಟ್‌ ಆಧಾರದ ಮೇಲೆ ಈ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ.

ಪ್ರಣಾಳಿಕೆಯಲ್ಲಿರುವ ಅಂಶಗಳಲ್ಲಿ ಕೆಲವು:

* ಸರ್ಕಾರಿ ಶಾಲೆಗಳನ್ನು ಕೇಂದ್ರೀಯ ವಿದ್ಯಾಲಯದ ಮಾದರಿಯಲ್ಲಿ ಗುಣಮಟ್ಟ ಏರಿಸುವುದು

* ಒಂದು ಮತ್ತು ಎರಡನೇ ತರಗತಿ ಶಾಲಾ ಮಕ್ಕಳಿಗೆ ಓದುವುದು, ಬರೆಯುವುದು ಇರುವುದಿಲ್ಲ. ಆಟಕ್ಕೆ ಒತ್ತು

* ಮೂರನೇ ತರಗತಿಯಿಂದ ಪುಸ್ತಕದ ಜತೆಗೆ ಟ್ಯಾಬ್ಲೆಟ್‌. ಸಾಮಾನ್ಯಜ್ಞಾನ, ವಿಜ್ಞಾನ, ಗಣಿತ ಕಲಿಕೆ ಹಾಗೂ ಸ್ಮಾರ್ಟ್‌ ಕ್ಲಾಸ್‌ಗೆ  ಸಹಕಾರಿ

* ಮನೆಯಲ್ಲಿಯೇ ಕಲಿಕೆ, ಮನೆಯಿಂದಲೇ ಆನ್‌ಲೈನ್‌ ಕಲಿಕೆಗೆ ಅವಕಾಶ
* 10ನೇ ತರಗತಿ ಬಳಿಕ ಒಂದು ಅಥವಾ ಎರಡು ವರ್ಷ ವೃತ್ತಿಪರ ಕೋರ್ಸ್‌
* ಕನ್ನಡದಲ್ಲಿಯೇ ವೃತ್ತಿಪರ ಕೋರ್ಸ್‌ಗಳಿಗೆ ಅವಕಾಶ
* ಅರ್ಹತೆ ಆಧರಿಸಿ ಮೀಸಲಾತಿ
* ಮೆರಿಟ್ ಆಧಾರದಲ್ಲಿ ಶೇ.10–15ರಷ್ಟು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry