‘ಹರಿವು’ ಸಿನಿಮಾ ಇಂದು ಯೂಟ್ಯೂಬ್‌ಗೆ

7

‘ಹರಿವು’ ಸಿನಿಮಾ ಇಂದು ಯೂಟ್ಯೂಬ್‌ಗೆ

Published:
Updated:
‘ಹರಿವು’ ಸಿನಿಮಾ ಇಂದು ಯೂಟ್ಯೂಬ್‌ಗೆ

ನಿರ್ದೇಶಕ ಮಂಸೋರೆ ಅವರ ‘ಹರಿವು’ ನೈಜ ಘಟನೆಯೊಂದನ್ನು ಆಧರಿಸಿ ತಯಾರಾದ ಚಿತ್ರ. ಮನುಷ್ಯ ಸಂಬಂಧಗಳು ಕಾಲದ ಹರಿವಿನಲ್ಲಿ ಹೇಗೆ ವಿಕ್ಷಿಪ್ತಗೊಳ್ಳುತ್ತವೆ ಎಂಬುದನ್ನು ಎರಡು ಕಥನಗಳ ಮೂಲಕ ಹೇಳುವ ಪ್ರಯತ್ನ ಈ ಚಿತ್ರದಲ್ಲಿದೆ.

ಹೃದಯದ ಸಮಸ್ಯೆಯಿಂದ ಬಳಲುತ್ತಿರುವ ಮಗನ ಚಿಕಿತ್ಸೆಗಾಗಿ, ಇದ್ದ ಹೊಲವನ್ನೇ ಮಾರಿ ಬಡರೈತನೊಬ್ಬ ನಗರಕ್ಕೆ ಬರುತ್ತಾನೆ. ಮಗನನ್ನು ಉಳಿಸಿಕೊಳ್ಳಲು ಹೆಣಗಾಡುವ ಪರಿ ಒಂದೆಡೆಯಾದರೆ, ಮುಂದೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ತಂದೆಯನ್ನು ನಿರ್ಲಕ್ಷಿಸಿ ತನ್ನ ವೃತ್ತಿಗೇ ಆದ್ಯತೆ ನೀಡುವ ಪತ್ರಕರ್ತ ಇನ್ನೊಂದೆಡೆ. ಈ ಎರಡೂ ವಿಭಿನ್ನ ಮನಸ್ಥಿತಿಗಳು ಸಂಧಿಸುವ ಸನ್ನಿವೇಶದಲ್ಲಿ ದುರಂತವಿದ್ದರೂ, ಬದಲಾಗುವ ದೃಷ್ಟಿಕೋನದ ಸಕಾರಾತ್ಮಕ ಚಿತ್ರಣವೂ ಇಲ್ಲಿದೆ.

ಮಂಸೋರೆ ನಿರ್ದೇಶಿಸಿದ ಈ ಚಿತ್ರದಲ್ಲಿ ಸಂಚಾರಿ ವಿಜಯ್ ಪ್ರಮುಖ ಪಾತ್ರದಲ್ಲಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳನ್ನೂ ಬಾಚಿಕೊಂಡಿರುವ 'ಹರಿವು' ಚಿತ್ರ ಇಂದಿನಿಂದ (ಜ.26) ಯೂಟ್ಯೂಬ್‌ನಲ್ಲಿ ಲಭ್ಯವಾಗಲಿದೆ. ವಿಶೇಷವೇನೆಂದರೆ, ಸಾಹಿತ್ಯ ಸಂಭ್ರಮದ ಭಾವುಕ ನೆನಪಿನೊಂದಿಗೆ, ನಾಲ್ಕು ವರ್ಷಗಳ ಹರಿವು ಪಯಣದ ಪ್ರದರ್ಶನಗಳನ್ನು ಈ ಸಿನಿಮಾ ಮುಗಿಸಿದೆ. ಆದರೆ ಇನ್ನಷ್ಟು ಪ್ರೇಕ್ಷಕರು ಈ ಸಿನಿಮಾ ನೋಡಲು ಉತ್ಸುಕರಾಗಿದ್ದಾರೆ. ಹಾಗಾಗಿ ಗಣರಾಜ್ಯೋತ್ಸವದ ನೆಪದಲ್ಲಿ, ಶುಕ್ರವಾರ ಮಧ್ಯಾಹ್ನ 12ರಿಂದ ಯೂಟ್ಯೂಬ್‌ನಲ್ಲಿ ಈ ಚಿತ್ರ ಮುಕ್ತವಾಗಿ ಲಭ್ಯವಾಗಲಿದೆ.

ಈಗಾಗಲೇ ನಗರದಲ್ಲಿ ಸುಮಾರು 20ಕ್ಕೂ‌ ಹೆಚ್ಚು ಖಾಸಗಿ ಪ್ರದರ್ಶನ ಹಾಗೂ ರಾಜ್ಯದೆಲ್ಲೆಡೆ 60 ಪ್ರದರ್ಶನಗಳನ್ನು ಕಂಡಿದೆ. ಮುಂಬೈ, ಚನ್ನೈ, ಕೇರಳ, ಹೈದರಾಬಾದ್‌, ದೆಹಲಿ ಮುಂತಾದೆಡೆಯೂ ‘ಹರಿವು’ಗೆ ಮೆಚ್ಚುಗೆ ವ್ಯಕ್ತವಾಗಿದೆ. 2016ರ ನವೆಂಬರ್‌ನಲ್ಲಿ ಅಮೆರಿಕದಲ್ಲೂ ವಿಶೇಷ ಪ್ರದರ್ಶನ ಕಂಡಿರುವುದು ಚಿತ್ರದ ಹೆಗ್ಗಳಿಕೆ.

ಚಿತ್ರ: ‘ಹರಿವು’

ನಿರ್ಮಾಪಕ: ಗಿರೀಶ್ ಗೌಡ

ನಿರ್ದೇಶಕ: ಮಂಸೋರೆ

ಮಂಸೋರೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry