ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಹ್ಮೋಸ್‌, ಆಕಾಶ್‌ ಕ್ಷಿಪಣಿಗಳ ಖರೀದಿಗೆ ಏಷಿಯನ್‌ ರಾಷ್ಟ್ರಗಳ ಆಸಕ್ತಿ

Last Updated 25 ಜನವರಿ 2018, 14:57 IST
ಅಕ್ಷರ ಗಾತ್ರ

ನವದೆಹಲಿ: ಏಷಿಯನ್‌ ರಾಷ್ಟ್ರಗಳು ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಭಾರತದಿಂದ ರಕ್ಷಣಾ ಸಾಮಾಗ್ರಿಗಳನ್ನು ಖರೀದಿಸಲು ಮುಂದಾಗಿವೆ. ಅದರಲ್ಲಿ ಆಕಾಶ್‌ ಮತ್ತು ಬ್ರಹ್ಮೋಸ್‌ ಕ್ಷಿಪಣಿಗಳು ಸೇರಿವೆ.

10 ಏಷಿಯನ್‌ ರಾಷ್ಟ್ರಗಳ ನಾಯಕರು ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಲು ನವದೆಹಲಿಗೆ ಬಂದಿಳಿದಿದ್ದಾರೆ. ಅವರೊಂದಿಗೆ ನಡೆದ ಸಭೆಯಲ್ಲಿ ಸೇನಾ ಪರಿಕರಗಳ ಖರೀದಿಯ ವಿಷಯ ಪ್ರಸ್ತಾತವಾಯಿತು.

‘ಆ್ಯಕ್ಟ್‌ ಈಸ್ಟ್‌ ಪಾಲಿಸಿ’ ಅನ್ವಯ ಭಾರತವು ದಕ್ಷಿಣ ಏಷ್ಯಾದ ರಾಷ್ಟ್ರಗಳೊಂದಿಗೆ ಹಲವಾರು ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದೆ. ಅದರಲ್ಲಿ ಕಡಲತಡಿಗಳ ಭದ್ರತೆ, ಸೇನಾ ಸಮರಾಭ್ಯಾಸ, ವ್ಯಾಪಾರ ಮತ್ತು ಬಂಡವಾಳ ಹೂಡಿಕೆಗಳು ಸೇರಿವೆ.

ಆಕಾಶ್‌ ಮಧ್ಯಮ ಶ್ರೇಣಿಯ ಕ್ಷಿಪಣಿಯಾಗಿದ್ದು, ಸಂಚಾರಿ ವಾಹನವೊಂದರಿಂದ ಉಡಾಯಿಸಬಹುದಾಗಿದೆ. ಇದನ್ನು ಡಿಆರ್‌ಡಿಓ ಅಭಿವೃದ್ಧಿ ಪಡಿಸಿದೆ. ಭಾರತ್‌ ಡೈನಾಮಿಕ್ಸ್‌ ಲಿಮಿಟೆಡ್‌ ಇದನ್ನು ತಯಾರಿಸುತ್ತಿದೆ. 30 ಕಿ.ಮೀ. ದೂರದಲ್ಲಿ 18 ಕಿ.ಮೀ. ಎತ್ತರದಲ್ಲಿನ ವಿಮಾನಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಈ ಕ್ಷಿಪಣಿಗಿದೆ.

ಬ್ರಹ್ಮೋಸ್‌ ಮಧ್ಯಮ ಶ್ರೇಣಿಯ ಸೂಪರ್‌ಸಾನಿಕ್‌ ಕ್ಷಿಪಣಿ. ಇದನ್ನು ಜಲಾಂತರಗಾಮಿ ನೌಕೆ, ಹಡಗು, ಯುದ್ಧವಿಮಾನ ಮತ್ತು ನೆಲದಲ್ಲಿ ಜೋಡಿಸಿದ ಪರಿಕರಗಳಿಂದಲೂ ನಿಗದಿತ ಗಮ್ಯದತ್ತ ಉಡಾಯಿಸಬಹುದು.

––––––––––––––––––––––––––––––––––––––––––––––––––––––––––––––––––––––––––––

ASEAN nations seek to purchase BrahMos, Akash missiles from India

ASEAN nations are seeking to purchase major defence and weapons systems from India, including the Akash and BrahMos missiles, according to a report by The Financial Express.

According to the report, export of Akash and BrahMos will be topping the agenda when the 10 ASEAN leaders meet during the ASEAN-India Commemorative Summit in New Delhi on the eve of India's Republic Day.

India has been increasing its engagement with the regional bloc as per its 'Act East Policy'. India has been making engagements in the fields of maritime security, military exercises, trade and investments.

Akash, a medium-range mobile surface-to-air missile has been developed by Defence Research and Development Organisation (DRDO) and produced by Bharat Dynamics Limited (BDL). The missile system can target aircrafts flying 30 kilometres away at altitudes of up to 18,000 metres.

The BrahMos is a medium-range ramjet supersonic cruise missile and is capable of being launched from submarines, ships, aircrafts and from land-based equipments.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT