ಬಡಜನ, ಬುಡಕಟ್ಟು ಕಲೆಗಳಲ್ಲಿ ಸೇವೆ ಸಲ್ಲಿಸಿದ ‘ಎಲೆ ಮರೆಯ ನಾಯಕರಿಗೆ' ಪದ್ಮಶ್ರೀ ಪುರಸ್ಕಾರ

7

ಬಡಜನ, ಬುಡಕಟ್ಟು ಕಲೆಗಳಲ್ಲಿ ಸೇವೆ ಸಲ್ಲಿಸಿದ ‘ಎಲೆ ಮರೆಯ ನಾಯಕರಿಗೆ' ಪದ್ಮಶ್ರೀ ಪುರಸ್ಕಾರ

Published:
Updated:
ಬಡಜನ, ಬುಡಕಟ್ಟು ಕಲೆಗಳಲ್ಲಿ ಸೇವೆ ಸಲ್ಲಿಸಿದ ‘ಎಲೆ ಮರೆಯ ನಾಯಕರಿಗೆ' ಪದ್ಮಶ್ರೀ ಪುರಸ್ಕಾರ

ನವದೆಹಲಿ: ಸಾಧಕರಿಗೆ ಗೌರವಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬಡವರಿಗೆ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಪದ್ಮಶ್ರೀ ಪ್ರಶಸ್ತಿಗಳನ್ನು ಘೋಷಿಸಿದೆ. ಜಾಗತಿಕಮಟ್ಟದಲ್ಲಿ ಉಚಿತ ಶಾಲೆಗಳು ಮತ್ತು ಜನಪ್ರಿಯ ಬುಡಕಟ್ಟು ಕಲೆಗಳನ್ನು ಸ್ಥಾಪಿಸಿದ ವ್ಯಕ್ತಿಗಳಿಗೆ ಈ ಗೌರವ ಸಂದಿದೆ.

ಮೂವರಿಗೆ ಪದ್ಮವಿಭೂಷಣ, ಒಂಬತ್ತು ಸಾಧಕರಿಗೆ ಪದ್ಮಭೂಷಣ, 73 ಪ್ರತಿಭೆಗಳಿಗೆ ಪದ್ಮಶ್ರೀ ಪ್ರಕಟಿಸಲಾಗಿದೆ. 2018ನೇ ಸಾಲಿಗೆ ಒಟ್ಟು 85 ಮಂದಿಗೆ ಗುರುವಾರ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. 

ಕರ್ನಾಟಕದ ಸೂಲಗಿತ್ತಿ ನರಸಮ್ಮ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.

ಎರಡು ಜೀವಗಳನ್ನು ಕಾಪಿಡುವ ಸೂಲಗಿತ್ತಿಯ ಕೆಲಸ. ಅಂದರೆ, ಆ ಜೀವಗಳಿಗೆ ಉಸಿರು ತುಂಬುವ ಮೂಲಕ ಮರುಜನ್ಮ ನೀಡುವುದೇ ಆಗಿರುವ ಆ ಕಾಯಕದಲ್ಲಿ ತೊಡಿಗದ್ದ ನರಸಮ್ಮಗೆ ಈ ಪುರಸ್ಕಾರ ಸಂದಿದೆ.

2013ರ ‘ವಯೋಶ್ರೇಷ್ಠ ಸಮ್ಮಾನ್‌’ ರಾಷ್ಟ್ರೀಯ ಪ್ರಶಸ್ತಿ ಪಡೆದ ಸೂಲಗಿತ್ತಿ ನರಸಮ್ಮ ಎಂಬ ಅಪ್ಪಟ ಗ್ರಾಮೀಣ ಪ್ರತಿಭೆ 1500ಕ್ಕೂ ಹೆಚ್ಚು ಹೆರಿಗೆ ಮಾಡಿಸಿ, ಜೀವಗಳಿಗೆ ಉಸಿರು ತುಂಬಿಸುವ ಕಾಯಕ ಮಾಡಿದ್ದಾರೆ.

ಕನ್ನಡಕಬೀರ ಇಬ್ರಾಹಿಂ ಸುತಾರ
44 ವರ್ಷಗಳಿಂದ ಭಜನೆ ಮೂಲಕ ಸಾಮಾಜಿಕ ಸಂದೇಶಗಳನ್ನು ಸಾರಿರುವ ‘ಕನ್ನಡ ಕಬೀರ’ ಎಂದೇ ಹೆಸರು ಗಳಿಸಿರುವ ಇಬ್ರಾಹಿಂ ಸುತಾರ ಅವರಿಗೆ ಪದ್ಮಶ್ರೀ ಲಭಿಸಿದೆ.

ಇತರ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಪ್ರಶಸ್ತಿಗೆ ಪಾತ್ರರಾಗಿರುವವರು
ಕೇರಳದ ಲಕ್ಷ್ಮಿಕುಟ್ಟಿ

ಲಕ್ಷ್ಮಿಕುಟ್ಟಿ ಕೇರಳದ ಬುಡಕಟ್ಟು ಮಹಿಳೆ. 500 ಗಿಡಮೂಲಿಕೆ ಔಷಧಿಗಳನ್ನು ನೆನಪಿನ ಶಕ್ತಿಯಿಂದಲೇ ಸಿದ್ಧಪಡಿಸುತ್ತಾರೆ ಮತ್ತು ವಿಶೇಷವಾಗಿ ಹಾವು ಮತ್ತು ಕ್ರಿಮಿಗಳ ಕಡಿತ ಪ್ರಕರಣಗಳಲ್ಲಿ ಸಾವಿರಾರು ಜನರಿಗೆ ಔಷಧ ನೀಡಿ ಸೇವೆ ಸಲ್ಲಿಸಿದ್ದಾರೆ.

ಅರವಿಂದ್ ಗುಪ್ತಾ
ಕಾನ್ಪುರದ ಐಐಟಿಯ ವಿದ್ಯಾರ್ಥಿಯಾಗಿದ್ದ ಅರವಿಂದ್ ಗುಪ್ತಾ, ವಿದ್ಯಾರ್ಥಿಗಳು ವಿಜ್ಞಾನ ಕಲಿಯಲು ಪ್ರೇರೇಪಿಸಿದ್ದಾರೆ. ಅವರಿಗೆ ಪದ್ಮಶ್ರೀ ಗೌರವ ಸಂದಿದೆ
ಗುಪ್ತಾ ನಾಲ್ಕು ದಶಕಗಳಲ್ಲಿ 3,000 ಶಾಲೆಗಳನ್ನು ಭೇಟಿ ಮಾಡಿದ್ದಾರೆ. 18 ಭಾಷೆಗಳಲ್ಲಿ ಆಟಿಕೆ ತಯಾರಿಕೆಯಲ್ಲಿ 6,200 ಕಿರುಚಿತ್ರಗಳನ್ನು ಮಾಡಿದ್ದಾರೆ ಮತ್ತು 1980ರ ದಶಕದಲ್ಲಿ ಜನಪ್ರಿಯ ಟಿವಿ ಶೋ ತಾರಂಗ್‌ಅನ್ನು ಆಯೋಜಿಸಿದ್ದರು.

ಭಜ್ಜು ಶ್ಯಾಮ್
ಅಂತಾರಾಷ್ಟ್ರೀಯವಾಗಿ ಮೆಚ್ಚುಗೆ ಪಡೆದ ಗೊಂಡ್ ಕಲಾವಿದ ಭಜ್ಜು ಶ್ಯಾಮ್ ಅವರಿಗೆ ಪ್ರಶಸ್ತಿ ನೀಡಲಾಗಿದೆ.

ಮಧ್ಯಪ್ರದೇಶದ ಚಿತ್ರಕಲೆ ಬುಡಕಟ್ಟು ಶೈಲಿಯ ಗೋಂಡ್ ವರ್ಣಚಿತ್ರಗಳ ಮೂಲಕ ಯುರೊಪ್‌ಅನ್ನು ಚಿತ್ರಿಸಲು ಶ್ಯಾಮ್ ಪ್ರಸಿದ್ಧವಾಗಿದೆ. ಬಡ ಬುಡಕಟ್ಟು ಕುಟುಂಬದಲ್ಲಿ ಜನಿಸಿದ ಅವರು ವೃತ್ತಿ ಕಲಾವಿದರಾಗುವ ಮೊದಲು ಕುಟುಂಬಕ್ಕೆ ಬೆಂಬಲ ನೀಡಲು ನೈಟ್ ಗಾರ್ಡ್ ಮತ್ತು ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡಿದ್ದರು. ಅವರ 'ಲಂಡನ್ ಜಂಗಲ್ ಬುಕ್' 30 ಸಾವಿರ ಪ್ರತಿಗಳು ಮಾರಾಟವಾದವು ಮತ್ತು ಇದು ಐದು ವಿದೇಶಿ ಭಾಷೆಗಳಲ್ಲಿ ಪ್ರಕಟಗೊಂಡಿತ್ತು.

ಸುಧಾಂಶು ಬಿಸ್ವಾಸ್
ಬಂಗಾಳದ 99 ವರ್ಷ ವಯಸ್ಸಿನ ಸ್ವಾತಂತ್ರ್ಯ ಹೋರಾಟಗಾರರಾದ ಪಶ್ಚಿಮ ಬಂಗಾಳದ ಸುಧಾಂಶು ಬಿಸ್ವಾಸ್ ಅವರು ಶಾಲಾ ಮತ್ತು ಅನಾಥಾಶ್ರಮಗಳನ್ನು ನಡೆಸುತ್ತಿದ್ದಾರೆ ಮತ್ತು ಉಚಿತ ಶಾಲೆ ಸ್ಥಾಪಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry