ಉತ್ಸವ ಅಗತ್ಯ

7

ಉತ್ಸವ ಅಗತ್ಯ

Published:
Updated:

ರಾಷ್ಟ್ರಕೂಟರ ಆಡಳಿತ ಕಾಲದ ವೈಭವವನ್ನು ಸ್ಮರಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ‘ರಾಷ್ಟ್ರಕೂಟ ಉತ್ಸವ’ ಆಚರಿಸಲು ಮುಂದಾಗಿರುವುದು ಸ್ತುತ್ಯರ್ಹ.

ವಾಸ್ತುಶಿಲ್ಪದ ಅತ್ಯದ್ಭುತ ಕೊಡುಗೆ ಎನಿಸಿರುವ ಎಲ್ಲೋರಾದ ಕೈಲಾಸನಾಥ ದೇಗುಲ, ಕನ್ನಡಿಗರ ವ್ಯಕ್ತಿತ್ವವನ್ನು ವಿಶದವಾಗಿ ವರ್ಣಿಸಿದ, ಕನ್ನಡದ ಮೊದಲ ಉದ್ಗ್ರಂಥ- ಅಮೋಘವರ್ಷನ ‘ಕವಿರಾಜಮಾರ್ಗ’ ಮುಂತಾದ ಹಿರಿಮೆಯ ಗರಿಯನ್ನು ಕರ್ನಾಟಕದ ಮುಕುಟಕ್ಕೇರಿಸಿರುವ ರಾಷ್ಟ್ರಕೂಟ ರಾಜಮನೆತನವನ್ನು ಸ್ಮರಿಸುವುದು ಇಂದಿನ ಅಗತ್ಯ. ಇಂಥ ಉತ್ಸವಗಳು ಇತಿಹಾಸದ ಬಗ್ಗೆ ಅರಿವು ಮೂಡಿಸಲು ಉಪಯುಕ್ತವಾಗಿವೆ.

– ಹಲವಾಗಲ ಶಂಭು, ರಾಣೆಬೆನ್ನೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry