ಗುಣಾತ್ಮಕ ವಿ.ವಿಯಾಗಿ...

7

ಗುಣಾತ್ಮಕ ವಿ.ವಿಯಾಗಿ...

Published:
Updated:

ಬೆಂಗಳೂರು ‘ಸೆಂಟ್ರಲ್ ವಿಶ್ವವಿದ್ಯಾಲಯ’ದ ಕುಲಪತಿ ಪ್ರೊ.ಎಸ್‌. ಜಾಫೆಟ್ ಅವರು ‘ವಾರದ ಸಂದರ್ಶನ’ದಲ್ಲಿ ‘ಜಾಗತಿಕ ಮಟ್ಟದ ವಿ.ವಿ.ಯಾಗಿ ರೂಪಿಸುವ ಕನಸು’ (ಪ್ರ.ವಾ., ಜ.21) ಹಂಚಿಕೊಂಡಿದ್ದಾರೆ. ನಮ್ಮ ವಿಶ್ವವಿದ್ಯಾಲಯಗಳು ಗುಣಮಟ್ಟವನ್ನು ಕಳೆದುಕೊಂಡು ನಾನಾ ಸಮಸ್ಯೆಗಳ ಕೇಂದ್ರಗಳಾಗಿ ನರಳುತ್ತಿರುವ ಸಮಯದಲ್ಲಿ, ಈ ರೀತಿಯ ‘ಜಾಗತಿಕ ಮಟ್ಟದ...’ ಕನಸನ್ನು ತುಂಬಿಕೊಂಡು ಒಂದು ಸಂಸ್ಥೆಯನ್ನು ಕಟ್ಟಲು ಹೊರಟಿರುವುದು ಆಶಾದಾಯಕವಾದ ವಿಷಯ. ಜೊತೆಗೆ ಈ ಸೆಂಟ್ರಲ್ ಕಾಲೇಜು ಕ್ಯಾಂಪಸ್ ತನ್ನ ಉದರದಲ್ಲಿ ಒಂದೂವರೆ ಶತಮಾನದಷ್ಟು ಅರ್ಥಪೂರ್ಣವಾದ ಪರಂಪರೆಯನ್ನು ಹೊಂದಿದೆ. ಪಾರಂಪರಿಕ ಕಟ್ಟಡಗಳ ಜೊತೆಗೆ ನಾಡು, ನುಡಿ, ಸಂಸ್ಕೃತಿ ಹಾಗೂ ವಿಜ್ಞಾನಕ್ಕೆ ಸಂಬಂಧಿಸಿದ ಮಹತ್ವಪೂರ್ಣ ಲೇಖಕರನ್ನು ಚಿಂತಕರನ್ನು, ವಿಜ್ಞಾನಿಗಳನ್ನು ಕೊಟ್ಟಿರುವ ಕೇಂದ್ರವಾಗಿದೆ. ಇಂದಿನ ಬಹಳಷ್ಟು ರಾಜಕೀಯ ನಾಯಕರು ಸಹ ಇಲ್ಲಿ ವಿದ್ಯಾರ್ಥಿ ನಾಯಕರಾಗಿ ಬೆಳೆದು ಬಂದವರು.

ಜಾಫೆಟ್ ಅವರು ನ್ಯೂಯಾರ್ಕ್ ಮತ್ತು ಷಿಕಾಗೊ ವಿಶ್ವವಿದ್ಯಾಲಯಗಳನ್ನು ಮಾದರಿಯಾಗಿಟ್ಟುಕೊಂಡಿದ್ದಾರೆ. ಸಂತೋಷದ ವಿಷಯ. ಬೆಂಗಳೂರು, ರಾಜ್ಯದ ರಾಜಧಾನಿಯಾಗಿರುವುದರಿಂದ ಕೆಲವು ಮಾದರಿಗಳಿಗೆ ಕಾರಣವಾಗಬೇಕಾಗಿದೆ. ಇದೇ ಸಮಯದಲ್ಲಿ ಪ್ರತಿಯೊಂದು ವಿಭಾಗವೂ ಸೃಜನಾತ್ಮಕವಾಗಿ ಕ್ರಿಯಾಶೀಲವಾಗಿರುವಂತೆ ನೋಡಿಕೊಳ್ಳುವುದು ಮುಖ್ಯ. ಬೆಂಗಳೂರು ದಿಕ್ಕುದೆಸೆಯಿಲ್ಲದೆ ಬೆಳೆಯುತ್ತಿದೆ. ಸಾವಿರಾರು ಹಳ್ಳಿಗಳನ್ನು

ಮತ್ತು ಅಲ್ಲಿಯ ಎಲ್ಲಾ ದೇಸಿ ಸಂಸ್ಕೃತಿಯನ್ನು ನಿರ್ನಾಮಮಾಡುತ್ತಿದೆ. ಅದರ ಬಗ್ಗೆಯೂ ಅಧ್ಯಯನ ನಡೆಯಬೇಕಾಗಿದೆ. ನಮ್ಮಲ್ಲಿ ಪ್ರಜ್ಞಾವಂತರಿಗೆ ಕೊರತೆಯಿಲ್ಲ.

– ಶೂದ್ರ ಶ್ರೀನಿವಾಸ್, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry