ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಗೆ ಪದ್ಮಶ್ರೀ

Last Updated 25 ಜನವರಿ 2018, 17:56 IST
ಅಕ್ಷರ ಗಾತ್ರ

ನವದೆಹಲಿ: ವಿವಿಧ ಕ್ಷೇತ್ರದಲ್ಲಿ ಎಲೆ ಮರೆಯ ಸಾಧನೆ ತೋರಿರುವ ವ್ಯಕ್ತಿಗಳಿಗೆ ಗೌರವ ಸಂದಿದ್ದು, ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಲಾಗಿದೆ.

ಪ್ರವಚನದ ಮೂಲಕ ನಾಡಿನ ಜನರ ಮನೆ ಮಾತಾಗಿರುವ ಸಿದ್ದೇಶ್ವರ ಸ್ವಾಮೀಜಿ ಅವರಿಗೆ ಗೌರವ ಸಂದಿರುವುದು ಎಲ್ಲರಿಗೂ ಸಂತಸ ಮೂಡಿಸಿದೆ.
ಸೂಫಿ ಪರಂಪರೆಯ ಪುನರುಜ್ಜೀವನ ಹಾಗೂ ಸರ್ವಧರ್ಮ ಭಾವೈಕ್ಯಕ್ಕಾಗಿ ಶ್ರಮಿಸುತ್ತಿರುವ ಮಹಾಲಿಂಗಪೂರದ ಇಬ್ರಾಹಿಂ ಸುತಾರ್ ಅವರೂ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ.

ಈ ಮೂಲಕ ರಾಜ್ಯದ ಇಬ್ಬರು ಪ್ರವಚನಕಾರರಾದ ಸಿದ್ದೇಶ್ವರ ಸ್ವಾಮೀಜಿ ಹಾಗೂ ಇಬ್ರಾಹಿಂ ಸುತಾರ್ ಅವರಿಗೆ ಈ ಗೌರವ ಸಂದಿರುವುದು ಹೆಗ್ಗಳಿಕೆ ವಿಷಯ.

ಸಾಧಕರಿಗೆ ಗೌರವಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬಡವರಿಗೆ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಪದ್ಮಶ್ರೀ ಪ್ರಶಸ್ತಿಗಳನ್ನು ಘೋಷಿಸಿದೆ. ಜಾಗತಿಕಮಟ್ಟದಲ್ಲಿ ಉಚಿತ ಶಾಲೆಗಳು ಮತ್ತು ಜನಪ್ರಿಯ ಬುಡಕಟ್ಟು ಕಲೆಗಳನ್ನು ಸ್ಥಾಪಿಸಿದ ವ್ಯಕ್ತಿಗಳಿಗೆ ಈ ಗೌರವ ಸಂದಿದೆ.

ಮೂವರಿಗೆ ಪದ್ಮವಿಭೂಷಣ, ಒಂಬತ್ತು ಸಾಧಕರಿಗೆ ಪದ್ಮಭೂಷಣ, 73 ಪ್ರತಿಭೆಗಳಿಗೆ ಪದ್ಮಶ್ರೀ ಪ್ರಕಟಿಸಲಾಗಿದೆ. ಈ ಸಾಲಿಗೆ ಒಟ್ಟು 85 ಮಂದಿಗೆ ಗುರುವಾರ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT