ಮುನ್ನಡೆಯಲ್ಲಿ ಸೂರ್ಯ

7

ಮುನ್ನಡೆಯಲ್ಲಿ ಸೂರ್ಯ

Published:
Updated:
ಮುನ್ನಡೆಯಲ್ಲಿ ಸೂರ್ಯ

ಹುಬ್ಬಳ್ಳಿ: ಚುರುಕಾಗಿ ಗುರಿ ಹಿಡಿದ ಕರ್ನಾಟಕದ ಆರ್‌.ಡಿ. ಸೂರ್ಯ ಅವರು ಹುಬ್ಬಳ್ಳಿ ಸ್ಪೋರ್ಟ್ಸ್‌ ಶೂಟಿಂಗ್‌ ಕ್ಲಬ್‌ ನಗರದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಮುಕ್ತ ಶೂಟಿಂಗ್‌ ಚಾಂಪಿಯನ್‌ಷಿಪ್‌ನ ಗುರುವಾರದ ಅಂತ್ಯಕ್ಕೆ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಓಪನ್‌ ಸೈಟ್‌ ರೈಫಲ್ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಅವರು ಒಟ್ಟು 656ಕ್ಕೆ 618 ಪಾಯಿಂಟ್ಸ್‌ ಕಲೆ ಹಾಕಿದರು. ತೆಲಂಗಾಣದ ಧನು ಶ್ರೀಕಾಂತ 610 ಪಾಯಿಂಟ್ಸ್‌ನಿಂದ ಎರಡನೇ ಸ್ಥಾನದಲ್ಲಿದ್ದಾರೆ. ಸೇನಾ ತಂಡದ ವಿಕ್ರಾಂತ ಸರೋಹ 609 ಪಾಯಿಂಟ್ಸ್‌ನಿಂದ ಮೂರನೇ ಸ್ಥಾನ ಹೊಂದಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಆತಿಥೇಯ ರಾಜ್ಯದ ಶೂಟರ್‌ ಜೀವಿತಾ ಸಚ್ಚಿದಾನಂದ ಒಟ್ಟು 436ಕ್ಕೆ 405 ಪಾಯಿಂಟ್ಸ್ ಗಳಿಸಿ ಮುನ್ನಡೆ ಪಡೆದುಕೊಂಡಿದ್ದಾರೆ. ಮಹಾರಾಷ್ಟ್ರದ ಆಯುಷ್‌ ರಾಹುಲ್‌ (403 ಪಾ.) ಮತ್ತು ತಮಿಳುನಾಡಿನ ಆರ್‌. ಧನಸ್ವಿನಿ (397) ಕ್ರಮವಾಗಿ ನಂತರದ ಎರಡು ಸ್ಥಾನಗಳಲ್ಲಿದ್ದಾರೆ. ಈ ವಿಭಾಗದಲ್ಲಿ ಒಟ್ಟು 15 ಸುತ್ತುಗಳು ಇರುತ್ತವೆ. ಈಗ ಐದು ಸುತ್ತುಗಳು ಮುಗಿದಿವೆ. 27ರಂದು ಫೈನಲ್‌ ಜರುಗಲಿದೆ.

ಜೀವಿತಾ ದಕ್ಷಿಣ ವಲಯದ 10 ಮೀಟರ್‌ ಏರ್ ರೈಫಲ್‌ ವಿಭಾಗದಲ್ಲಿ ದಾಖಲೆಯೊಂದಿಗೆ ಪದಕ ಜಯಿಸಿದ್ದರು. ಪುರುಷರ ವಿಭಾಗದಲ್ಲಿ ಮುನ್ನಡೆಯಲ್ಲಿರುವ ಸೂರ್ಯ ಭಾರತ ತಂಡದ ಶಿಬಿರದಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry