ಸ್ಟ್ಯಾಂಡರ್ಡ್‌: ಹೊಸ ಉತ್ಪನ್ನ ಪೇಟೆಗೆ

7

ಸ್ಟ್ಯಾಂಡರ್ಡ್‌: ಹೊಸ ಉತ್ಪನ್ನ ಪೇಟೆಗೆ

Published:
Updated:
ಸ್ಟ್ಯಾಂಡರ್ಡ್‌: ಹೊಸ ಉತ್ಪನ್ನ ಪೇಟೆಗೆ

ಬೆಂಗಳೂರು: ತ್ವರಿತವಾಗಿ ಬಿಕರಿಯಾಗುವ ವಿದ್ಯುನ್ಮಾನ ಸರಕು (ಎಫ್‌ಎಂಜಿ) ತಯಾರಿಕಾ ಸಂಸ್ಥೆ ಹ್ಯಾವೆಲ್ಸ್‌ನ ಅಂಗಸಂಸ್ಥೆಯಾಗಿರುವ ಸ್ಟ್ಯಾಂಡರ್ಡ್‌, ದಕ್ಷಿಣ ಭಾರತದಲ್ಲಿ ತನ್ನ ವಹಿವಾಟು ವಿಸ್ತರಣೆಗೆ ಮುಂದಾಗಿದೆ.

ಈ ವಿಸ್ತರಣೆ ಕಾರ್ಯತಂತ್ರದ ಅಂಗವಾಗಿ  ವಿಶಾಲ ಶ್ರೇಣಿಯ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ಮತ್ತು ಸುರಕ್ಷತೆಗೆ ಒತ್ತು ನೀಡಿರುವ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

‘ಸ್ಟ್ಯಾಂಡರ್ಡ್‌ ಉತ್ಪನ್ನಗಳ ದಕ್ಷಿಣ ಭಾರತದಲ್ಲಿನ ವಹಿವಾಟು ದೇಶದ ಸರಾಸರಿಗಿಂತ ಹೆಚ್ಚಿಗೆ ಇದೆ. ಕರ್ನಾಟಕದಲ್ಲಿ ಶೇ 27ರಷ್ಟು ಏರಿಕೆ ದಾಖಲಿಸುತ್ತಿದೆ. ₹ 500 ಕೋಟಿಗಳ ವಹಿವಾಟನ್ನು ಎರಡು ಮೂರು ವರ್ಷಗಳಲ್ಲಿ ವಹಿವಾಟನ್ನು ₹ 1,000 ಕೋಟಿಗೆ ಹೆಚ್ಚಿಸುವ ಗುರಿ ಹಾಕಿಕೊಂಡಿದೆ. ಈ ಉದ್ದೇಶಕ್ಕೆ ಹಂಚಿಕೆದಾರರ ಸಂಖ್ಯೆಯನ್ನೂ ದುಪ್ಪಟ್ಟುಗೊಳಿಸಲಾಗುತ್ತಿದೆ.

‘ಈಗ ಯುವ ಗ್ರಾಹಕರನ್ನು ಗಮನದಲ್ಲಿ ಇಟ್ಟುಕೊಂಡು ಸ್ಮಾರ್ಟ್‌ಫೋನ್‌ಗಳಿಂದಲೂ ನಿರ್ವಹಿಸಬಹುದಾದ ವಾಟರ್‌ ಹೀಟರ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಪರಸ್ಪರ ಸಂವಹನ ನಡೆಸುವ ತಂತ್ರಜ್ಞಾನದ ಡಿಜಿಟಲ್‌ ಸಾಧನಗಳನ್ನು (ಐಒಟಿ) ಈ ವಾಟರ್‌ ಹೀಟರ್‌ಗಳಲ್ಲಿ ಅಳವಡಿಸಲಾಗಿದೆ.

‘ಇವುಗಳ ವಿನ್ಯಾಸ ತುಂಬ ಆಕರ್ಷಕವಾಗಿದೆ. ಪೂರ್ಣ ಪ್ರಮಾಣದ ಇನ್‌ಸ್ಟಂಟ್‌, ಮೆಟಲ್‌, ಪ್ಲಾಸ್ಟಿಕ್‌, ಸ್ಕ್ವೇರ್‌ ಮಾದರಿಗಳು ಎಲ್ಲ ಬಗೆಯ ಗಾತ್ರದಲ್ಲಿ ಲಭ್ಯ ಇವೆ. ಇವುಗಳ ಬೆಲೆ ₹ 3,500  ರಿಂದ 14,000 ವರೆಗೆ ಇದೆ’ ಎಂದು ಹ್ಯಾವೆಲ್ಸ್‌ನ ಉಪಾಧ್ಯಕ್ಷ ಎ. ಆರ್‌. ಬ್ಯಾನರ್ಜಿ ಅವರು ಹೇಳಿದ್ದಾರೆ.

‘ಟೈಮರ್‌ ಅಳವಡಿಸಿರುವ ಧ್ವನಿ ಮೂಲಕವೂ ಕಾರ್ಯನಿರ್ವಹಿಸುವ ಈ ವಾಟರ್‌ ಹೀಟರ್‌ಗಳನ್ನು ದೂರ

ದಿಂದಲೇ ನಿರ್ವಹಿಸಬಹುದು. ರಿಮೋಟ್‌ ಕಂಟ್ರೋಲ್‌ ಫ್ಯಾನ್‌ ಮತ್ತು ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಿರುವ ಹೊಸ ಸ್ವಿಚ್‌ ಗೇರ್‌ ‘ಆಸ್ಪಿಡಾ’ ಪರಿಚಯಿಸಲಾಗಿದೆ.

‘ಈ ಶ್ರೇಣಿಯ ಉತ್ಪನ್ನಗಳು ಗರಿಷ್ಠ ಸುರಕ್ಷತೆ ಒಳಗೊಂಡಿವೆ. ಸುಲಭ ಬಳಕೆ, ಸುರಕ್ಷತೆ ವಿಷಯದಲ್ಲಿ ಜಾಗತಿಕ ಗುಣಮಟ್ಟ ಕಾಯ್ದುಕೊಳ್ಳಲಾಗಿದೆ. ಹೊರ ನೋಟಕ್ಕೆ ತುಂಬ ಆಕರ್ಷಕವಾಗಿರುವ ಸ್ವಿಚ್‌ ಶ್ರೇಣಿ ಝೋ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry