ಚಿನ್ನ, ಬೆಳ್ಳಿ ದರ ಏರಿಕೆ

7

ಚಿನ್ನ, ಬೆಳ್ಳಿ ದರ ಏರಿಕೆ

Published:
Updated:
ಚಿನ್ನ, ಬೆಳ್ಳಿ ದರ ಏರಿಕೆ

ಮುಂಬೈ: ಇಲ್ಲಿಯ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆಯು ಸತತ ಐದನೇ ದಿನವೂ ಏರಿಕೆ ಕಂಡಿದೆ.

ಸಂಗ್ರಹಕಾರರು ಮತ್ತು ಚಿನ್ನಾಭರಣ ವರ್ತಕರಿಂದ ಬೇಡಿಕೆ ಹೆಚ್ಚಿದ್ದರಿಂದ ಗುರುವಾರದ ವಹಿವಾಟಿನಲ್ಲಿ ಪ್ರತಿ 10 ಗ್ರಾಂಗಳಿಗೆ ₹ 170ರಂತೆ ಹೆಚ್ಚಳವಾಗಿದೆ. ಆಭರಣ ಚಿನ್ನವು (ಶೇ 99.5ರಷ್ಟು ಶುದ್ಧತೆ) ₹ 30,445 ಕ್ಕೆ ಮತ್ತು ಅಪರಂಜಿ ಚಿನ್ನವು (ಶೇ 99.9ರಷ್ಟು ಶುದ್ಧತೆ) ₹ 30,595ಕ್ಕೆ ತಲುಪಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಡಿಸೆಂಬರ್‌ ತಿಂಗಳ ಮಧ್ಯಭಾಗದಿಂದ ಶೇ 10ರಷ್ಟು ಏರಿಕೆ ದಾಖಲಿಸುತ್ತಿದೆ. ಇದು ಸ್ಥಳೀಯ ಪೇಟೆಯಲ್ಲಿಯೂ ಪ್ರತಿಫಲನಗೊಳ್ಳುತ್ತಿದೆ.

ಕೈಗಾರಿಕಾ ಘಟಕಗಳಿಂದ ಬೇಡಿಕೆ ಹೆಚ್ಚಿದ್ದರಿಂದ ಬೆಳ್ಳಿ ಬೆಲೆಯು ಪ್ರತಿ ಕೆಜಿಗೆ ₹ 620ರಂತೆ ಏರಿಕೆ ದಾಖಲಿಸಿ ₹ 39,765ಕ್ಕೆ ತಲುಪಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry