ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುದೀಪ್‌ ಸಿಂಗ್‌ ಮೂರು ದಾಖಲೆ

ಕರ್ನಾಟಕಕ್ಕೆ ಚಿನ್ನ ತಂದುಕೊಟ್ಟ ಕಾಂಚನಾ
Last Updated 25 ಜನವರಿ 2018, 20:16 IST
ಅಕ್ಷರ ಗಾತ್ರ

ಮೂಡುಬಿದಿರೆ: ರೈಲ್ವೇಸ್‌ ತಂಡದ ಗುರುದೀಪ್‌ ಸಿಂಗ್‌ ಇಲ್ಲಿ ನಡೆದ 70ನೇ ರಾಷ್ಟ್ರಮಟ್ಟದ ಪುರುಷರ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ 390 ಕೆ.ಜಿ.ಭಾರ ಎತ್ತುವ ಮೂಲಕ ಮೂರು ನೂತನ ದಾಖಲೆ ನಿರ್ಮಿಸಿದರು.

105 ಕೆ.ಜಿ. ಗಿಂತ ಮೇಲ್ಪಟ್ಟವರ ವಿಭಾಗದಲ್ಲಿ 2017ರಲ್ಲಿ ಅಮೆರಿಕದಲ್ಲಿ ವಿಶ್ವ ಚಾಂಪಿಯನ್‌ಷಿಪ್‌ ವೇಟ್‌ಲಿಫ್ಟಿಂಗ್‌ನಲ್ಲಿ ಸ್ಥಾಪಿಸಿದ್ದ ತಮ್ಮದೇ ಮೂರು ದಾಖಲೆಗಳನ್ನು (ಸ್ನ್ಯಾಚ್‌ 172 ಕೆ.ಜಿ, ಕ್ಲೀನ್‌ ಮತ್ತು ಜರ್ಕ್‌ 216 ಕೆ.ಜಿ: ಒಟ್ಟು 388 ಕೆ.ಜಿ) ಮೀರಿ ನೂತನ ದಾಖಲೆ ನಿರ್ಮಿಸಿದರು.

ಕರ್ನಾಟಕ ರಾಜ್ಯ ವೇಟ್‌ಲಿಫ್ಟಿಂಗ್‌ ಸಂಸ್ಥೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವೇಟ್‌ಲಿಫ್ಟಿಂಗ್‌ ಸಂಸ್ಥೆ ಮತ್ತು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ಆಶ್ರಯದಲ್ಲಿ ನಡೆದ ಸ್ಪರ್ಧೆಯಲ್ಲಿ ಗುರುದೀಪ್‌ ಸ್ನ್ಯಾಚ್‌ ವಿಭಾಗದಲ್ಲಿ 173 ಕೆ.ಜಿ, ಕ್ಲೀನ್‌ ಮತ್ತು ಜರ್ಕ್‌ ವಿಭಾಗದಲ್ಲಿ 217 ಕೆ.ಜಿ ಭಾರ ಎತ್ತಿದರು. ಅವರ ಸಹೋದ್ಯೋಗಿ ಹಿಮಾಂಶು ಕೆ. ಚಾಂಗ್‌ 384 ಕೆ.ಜಿ ಎತ್ತಿ ಬೆಳ್ಳಿ(ಸ್ನ್ಯಾಚ್‌ 170 ಕೆ.ಜಿ, ಕ್ಲೀನ್‌ ಮತ್ತು ಜರ್ಕ್‌ 214 ಕೆ.ಜಿ) ಗೆದ್ದರು. ಪಂಜಾಬ್‌ನ ಜಸಪ್ರೀತ್‌ ಸಿಂಗ್‌ 341 ಕೆ.ಜಿ ಭಾರ ಎತ್ತಿ(ಸ್ನ್ಯಾಚ್‌ 148 ಕೆ.ಜಿ, ಕ್ಲೀನ್‌ ಮತ್ತು ಜರ್ಕ್‌ 193 ಕೆ.ಜಿ) ಕಂಚು ಪಡೆದರು.

90 ಕೆ.ಜಿ ಗಿಂತ ಮೇಲ್ಪಟ್ಟ ಮಹಿಳೆಯರ ಸ್ಪರ್ಧೆಯಲ್ಲಿ ಆರಂಭಿಕ ಹಂತದಲ್ಲಿ ಕುಸಿತ ಕಂಡಿದ್ದ ಕರ್ನಾಟಕ ತಂಡದ ಕಾಂಚನಾ ಪಿ.ಎಂ. ಬಳಿಕ ಸುಧಾರಿಸಿಕೊಂಡು 210 ಕೆ.ಜಿ ಭಾರ ಎತ್ತಿ ಚಿನ್ನ ಗೆದ್ದರು. ಸ್ನ್ಯಾಚ್‌ ವಿಭಾಗದಲ್ಲಿ 88 ಕೆ.ಜಿ, ಕ್ಲೀನ್‌ ಮತ್ತು ಜರ್ಕ್‌ನಲ್ಲಿ 122 ಕೆ.ಜಿ ಭಾರ ಎತ್ತಿದರು. ರೈಲ್ವೆಯ ಮೋನಿಕಾ ಬೆಳ್ಳಿ (ಸ್ನ್ಯಾಚ್‌ 92 ಕೆ.ಜಿ, ಕ್ಲೀನ್‌ ಮತ್ತು ಜರ್ಕ್‌ 117 ಕೆ.ಜಿ, ಒಟ್ಟು 209)ಪಡೆದರು.  ಆಂಧ್ರಪ್ರದೇಶದ ಎಸ್‌. ಶಿರೋಮಣಿ 203 ಕೆ.ಜಿ ಭಾರ ಎತ್ತಿ (ಸ್ನ್ಯಾಚ್‌ 170 ಕೆ.ಜಿ, ಕ್ಲೀನ್‌ ಮತ್ತು ಜರ್ಕ್‌ 214 ಕೆ.ಜಿ)  ಕಂಚು ಪಡೆದರು.

ಫಲಿತಾಂಶ: 105 ಕೆ.ಜಿ ಪುರುಷರ ವಿಭಾಗ: ಚಂದ್ರಕಾಂತ್‌ ಮಾಲಿ, ಸೇನಾ ತಂಡ, (ಸ್ನ್ಯಾಚ್‌ 154 ಕೆ.ಜಿ., ಕ್ಲೀನ್ ಮತ್ತು ಜರ್ಕ್ 191 ಕೆ.ಜಿ. ಒಟ್ಟು: 345 ಕೆ.ಜಿ)–1, ಹರಿಯಾಣದ ವಿಶಾಲ್‌ ಸೋಳಂಕಿ (ಸ್ನ್ಯಾಚ್‌ 155 ಕೆ.ಜಿ, ಕ್ಲೀನ್‌ ಮತ್ತು ಜರ್ಕ್‌ 188 ಕೆ.ಜಿಒಟ್ಟು: 343 ಕೆ.ಜಿ)–2, ಹರಿಯಾಣದ ಗುರಮೈಲ್‌ ಸಿಂಗ್‌ (ಸ್ನ್ಯಾಚ್‌ 152 ಕೆ.ಜಿ., ಕ್ಲೀನ್ ಮತ್ತು ಜರ್ಕ್ 187 ಕೆ.ಜಿ. ಒಟ್ಟು: 339 ಕೆ.ಜಿ)–3

ಕರ್ನಾಟಕಕ್ಕೆ ಚಿನ್ನ ತಂದ ಕಾಂಚನಾ
ಆರಂಭದಿಂದ ಹಂತದಿಂದ ಗೆಲುವು ಯಾರಿಗೆ ಎಂಬುದು ಹೇಳುವುದು ಕಷ್ಟದ ಕೆಲಸವಾಗಿತ್ತು. ಚಿನ್ನ ಗೆಲ್ಲುವ ಆತ್ಮವಿಶ್ವಾಸ ಬತ್ತಿ ಹೊಗಿದ್ದ ಕರ್ನಾಟಕಕ್ಕೆ 90 ಕೆ.ಜಿ ಗಿಂತ ಮೇಲ್ಟಟ್ಟ ಮಹಿಳೆಯರ ವಿಭಾಗದಲ್ಲಿ ಕೊನೆ ಯತ್ನದ ಸ್ನ್ಯಾಚ್‌ ವಿಭಾಗದಲ್ಲಿ ಪದಕ ಗೆಲ್ಲುವ ಹುಮ್ಮಸ್ಸು ಕಾಂಚನಾ ಅವರಿಂದ ಬಂತು. 210 ಕೆ.ಜಿ ಭಾರ ಎತ್ತಿದ ಕಾಂಚನಾ ಚಿನ್ನ ಗೆದ್ದರು.

ಸ್ನ್ಯಾಚ್‌ ವಿಭಾಗದಲ್ಲಿ 88 ಕೆ.ಜಿ, ಕ್ಲೀನ್‌ ಮತ್ತು ಜರ್ಕ್‌ನಲ್ಲಿ 122 ಕೆ.ಜಿ ಭಾರ ಎತ್ತಿ ಚಿನ್ನದ ಪದಕದೊಂದಿಗೆ ಸಂಭ್ರಮಿಸಿದರು. ವೇದಿಕೆ ಮುಂಭಾಗದಲ್ಲಿದ್ದ ಜನ ಕರ್ನಾಟಕ ಪದಕ ಪಡೆಯುತ್ತಿದಂತೆ ಕೇಕೆ ಹಾಕಿ ಖುಷಿ ಪಟ್ಟರು.

*
ಒಂದೇ ತಿಂಗಳ ಅಂತರದಲ್ಲಿ ನನ್ನ ದಾಖಲೆಯನ್ನು ನಾನೇ ಮೀರಿರುವುದು ಹೆಮ್ಮೆ ತಂದಿದೆ. ಸ್ನ್ಯಾಚ್‌, ಕ್ಲೀನ್‌ ಮತ್ತು ಜರ್ಕ್‌ ಹಾಗೂ ಒಟ್ಟು ವಿಭಾಗದಲ್ಲಿ ಎಲ್ಲ ದಾಖಲೆಗಳನ್ನು ಮುರಿದಿರುವುದರಿಂದ ಖುಷಿಯಾಗಿದೆ.
–ಗುರದೀಪ್ ಸಿಂಗ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT