ಗೂಳಿಯ ನಾಗಾಲೋಟಕ್ಕೆ ತಡೆ

7

ಗೂಳಿಯ ನಾಗಾಲೋಟಕ್ಕೆ ತಡೆ

Published:
Updated:
ಗೂಳಿಯ ನಾಗಾಲೋಟಕ್ಕೆ ತಡೆ

ಮುಂಬೈ: ಸತತ ಆರು ವಹಿವಾಟಿನ ದಿನಗಳಲ್ಲಿ ನಿರಂತರವಾಗಿ ನಾಗಾಲೋಟದಲ್ಲಿ ಓಡುತ್ತಲೇ ಇದ್ದ ಸಂವೇದಿ ಸೂಚ್ಯಂಕವು ಗುರುವಾರದ ವಹಿವಾಟಿನಲ್ಲಿ ಇಳಿಕೆ ದಾಖಲಿಸಿ ನಿಟ್ಟುಸಿರುಬಿಟ್ಟಿತು.

ಸಂವೇದಿ ಸೂಚ್ಯಂಕವು 111 ಅಂಶಗಳ ಕುಸಿತ ಕಂಡು 36,050 ಅಂಶಗಳಲ್ಲಿ ದಿನದ ವಹಿವಾಟು ಕೊನೆಗೊಳಿಸಿತು. ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ ಕೂಡ 16 ಅಂಶಗಳ (11,069 ಅಂಶ) ಇಳಿಕೆ ಕಂಡಿತು.

ಮುಂದಿನ ವಾರ ಮಂಡನೆಯಾಗಲಿರುವ ಕೇಂದ್ರ ಸರ್ಕಾರದ ಬಜೆಟ್‌ವರೆಗೆ ಕಾದು ನೋಡಲು ಹೂಡಿಕೆದಾರರು ನಿರ್ಧರಿಸಿದ್ದಾರೆ.

ದಿನದ ವಹಿವಾಟಿನಲ್ಲಿ ಸೂಚ್ಯಂಕವು 36,247 ಅಂಶಗಳಿಗೆ ಏರಿಕೆ ಕಂಡಿತ್ತು. ಒಂದು ಹಂತದಲ್ಲಿ 36 ಸಾವಿರದ ಗಡಿ ಕೆಳಗೂ ಇಳಿದಿತ್ತು. ದಾಖಲೆ ಮಟ್ಟದಲ್ಲಿನ ಲಾಭ ಮಾಡಿಕೊಳ್ಳಲು ಮಾರಾಟ ಒತ್ತಡ ಹೆಚ್ಚಿತ್ತು. ಆದರೆ, ವಹಿವಾಟಿನ ಕೊನೆಯಲ್ಲಿ ಕೊಂಚ ಚೇತರಿಕೆ ಕಂಡರೂ 111 ಅಂಶಗಳ ಕುಸಿತದೊಂದಿಗೆ ವಹಿವಾಟು ಅಂತ್ಯಗೊಳಿಸಿತು. ‘ನಿಫ್ಟಿ’ಯಲ್ಲಿಯೂ ಇದೇ ಬಗೆಯ ವಿದ್ಯಮಾನ ಕಂಡು ಬಂದಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry