ಫೈನಲ್‌ಗೆ ಸಿಲಿಕ್‌

7

ಫೈನಲ್‌ಗೆ ಸಿಲಿಕ್‌

Published:
Updated:
ಫೈನಲ್‌ಗೆ ಸಿಲಿಕ್‌

ಮೆಲ್ಬರ್ನ್: ಕ್ರೊವೇಷ್ಯಾದ ಮರಿನ್ ಸಿಲಿಕ್‌ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್‌ ತಲುಪಿದ್ದಾರೆ.

ಮೂರನೇ ಬಾರಿ ಗ್ರ್ಯಾನ್‌ಸ್ಲಾಂ ಟೂರ್ನಿಯಲ್ಲಿ ಫೈನಲ್ ತಲುಪಿರುವ ಸಿಲಿಕ್‌ ಗುರುವಾರದ ಸೆಮಿಫೈನಲ್ ಪಂದ್ಯದಲ್ಲಿ 6–2, 7–6, 6–2ರಲ್ಲಿ ಕೆಲೆ ಎಡ್ಮಂಡ್‌ಗೆ ಸೋಲುಣಿಸಿದರು. ಸಿಲಿಕ್ ಆಸ್ಟ್ರೇಲಿಯಾ ಓಪನ್‌ನಲ್ಲಿ ಫೈನಲ್‌ ತಲುಪಿದ ಕ್ರೊವೇಷ್ಯಾದ ಮೊದಲ ಆಟಗಾರ ಎನಿಸಿದ್ದಾರೆ.

ಫೆಡರರ್‌–ಚುಂಗ್ ಪೈಪೋಟಿ: ಶುಕ್ರವಾರ ನಡೆಯುವ ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ರೋಜರ್ ಫೆಡರರ್‌ ಹಾಗೂ ದಕ್ಷಿಣ ಕೊರಿಯಾದ ಚುಂಗ್‌ ಹೆಯಾನ್‌ ಆಡಲಿದ್ದಾರೆ.

ಮೊದಲ ಬಾರಿ ಗ್ರ್ಯಾನ್‌ಸ್ಲಾಂ ಟೂರ್ನಿಯ ಫೈನಲ್ ತಲುಪಿರುವ 21 ವರ್ಷದ ಯುವ ಆಟಗಾರ ಚುಂಗ್‌ 19 ಪ್ರಶಸ್ತಿಗಳ ಒಡೆಯ ಫೆಡರರ್‌ ಎದುರು ಆಡಲಿದ್ದಾರೆ.

ಶುಕ್ರವಾರದ ಪಂದ್ಯಗಳು

ಪುರುಷರ ಸಿಂಗಲ್ಸ್‌ ಸೆಮಿಫೈನಲ್‌: ರೋಜರ್ ಫೆಡರರ್‌–ಚುಂಗ್ ಹೆಯಾನ್‌

ಪಂದ್ಯ ಆರಂಭ: ಮಧ್ಯಾಹ್ನ 2 ಗಂಟೆ.

ಮಹಿಳೆಯರ ಡಬಲ್ಸ್ ಫೈನಲ್‌: ಕ್ರಿಸ್ಟಿನಾ ಮೆಡೆನೊವಿಚ್‌, ಟೈಮಿಯಾ ಬಾಬೊಸ್‌–ಎಲೆನಾ ವೆಸ್ನಿನಾ, ಎಕಟೆರಿನಾ ಮಕರೊವಾ

ಪಂದ್ಯ ಆರಂಭ: ಬೆಳಿಗ್ಗೆ 10.30

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry